ವಾತಾವರಣದಲ್ಲಿ ತೇವಾಂಶ: ರೇಷ್ಮೆಗೂಡಿಗೆ ಬೆಲೆ ಕುಸಿತವಿಜಯಪುರ: ಮೋಡ ಮುಸುಕಿದ ವಾತಾವರಣ ಹಾಗೂ ಆಗಾಗ ಬೀಳುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ, ರೇಷ್ಮೆಗೂಡಿನಿಂದ ಸರಿಯಾಗಿ ನೂಲು ಬಿಚ್ಚಾಣಿಕೆ ಆಗದ ಕಾರಣ, ರೇಷ್ಮೆಗೂಡಿಗೆ ಸಿಗಬೇಕಾಗಿರುವ ಬೆಲೆ ಇಳಿಮುಖವಾಗುತ್ತಿದ್ದು, ೭೦೦ ರು.ಗಳಿಗೆ ಮಾರಾಟವಾಗುತ್ತಿದ್ದ ಕೆ.ಜಿ ರೇಷ್ಮೆ ಗೂಡು ಇದೀಗ ೫೩೦ಕ್ಕೆ ಇಳಿಕೆಯಾಗಿದೆ.