ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅಪರಿಚಿತ ಮೃತದೇಹಗಳ ಅಂತ್ಯಕ್ರಿಯೆ ಹಾಗೂ ಆ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಶುಕ್ರವಾರ ಅಧಿಕೃತವಾಗಿ ರಂಗಪ್ರವೇಶ ಮಾಡಿದೆ.
ಬಿಎಂಟಿಸಿ ನೌಕರರು ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬದವರು ಆರ್ಥಿಕ ಸಮಸ್ಯೆ ಗುರಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಅಪಘಾತ ವಿಮಾ ಮೊತ್ತವನ್ನು 1 ಕೋಟಿ ರು.ನಿಂದ 1.25 ಕೋಟಿ ರು.ಗೆ ಹೆಚ್ಚಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ಬಿಎಂಟಿಸಿ ಒಡಂಬಡಿಕೆ ಮಾಡಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಗುಹೆಯೊಂದರಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ರಷ್ಯಾ ಕುಟುಂಬವನ್ನು ಭಾರತದಿಂದ ಗಡೀಪಾರು ಮಾಡುವುದರಿಂದ ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ನಿರ್ಬಂಧಿಸಿದೆ
ಯಮೆನ್ ದೇಶದಲ್ಲಿ ಕೇರಳ ಮೂಲದ ನಿಮಿಷ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ಥ ಕುಟುಂಬದೊಂದಿಗೆ ಮಾತನಾಡಿ ಮುಂದೂಡುವ ಮೂಲಕ ಹೊಸ ಆಸೆ ಚಿಗುರುವಂತೆ ಮಾಡಿದ ಡಾ.ಮೌಲಾ ಷರೀಫ್ ಅವರ ಕಾರ್ಯ ಶ್ಲಾಘನೀಯ
ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದೊಳಗೆ ದಾರಿ ಹುಡುಕಲು ನೆರವಾಗುವ ‘ನಮ್ಮ ನಕ್ಷೆ’ ಪೋರ್ಟಲ್ ರೂಪಿಸುತ್ತಿರುವ ನೈಋತ್ಯ ರೈಲ್ವೆಯು ರಾಜ್ಯದ ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳ ಡಿಜಿಟಲ್ ನ್ಯಾವಿಗೇಷನ್ ಕಾರ್ಯವನ್ನು ಕೈಗೊಂಡಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಏಷ್ಯನ್ ಆನೆಗಳು ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ನ ಹಿಮೇಜಿ-ಸಫಾರಿ ಪಾರ್ಕ್‌ಗೆ ಏರ್ ಲಿಫ್ಟ್ ಮೂಲಕ ಪ್ರಯಾಣ ಬೆಳೆಸಿದವು.
ನಗರದಲ್ಲಿ ಸುಳ್ಳು ಆಸ್ತಿ ಮಾಹಿತಿ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಪರಿಷ್ಕೃತ ಆಸ್ತಿ ಮೊತ್ತ ಪಾವತಿ ಮಾಡದಿದ್ದರೆ, ಸಂಬಂಧಪಟ್ಟ ಆಸ್ತಿಯ ಮಾರಾಟ, ವರ್ಗಾವಣೆ ತಡೆ ಹಿಡಿಯುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.