ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸೋಣ: ಶಾಸಕ ಎಆರ್ಕೆನಾನು ರಾಜಕಾರಣದಲ್ಲಿ ನೇರವಾದಿಯಾಗಿ ಆ ಕೆಲಸವಾಗುವುದಿದ್ದರೆ ಮಾತ್ರ ಆ ಕೆಲಸ ಮಾಡಿಕೊಡುವೆ. ಇಲ್ಲದಿದ್ದರೆ ಆಗಲ್ಲ ಎಂದು ಹೇಳುವ ಕೆಲಸ ಮಾಡುತ್ತಿದ್ದೆನೆ, ನನ್ನ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳಿಗೂ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಸ್ತು ಎನ್ನುತ್ತಿದ್ದಾರೆ, ಹಾಗಾಗಿಯೇ ಕ್ಷೇತ್ರದ ವಿವಿಧ ಮೂಲಗಳಿಂದ ನೂರು ಕೋಟಿ ಅನುದಾನ ದೊರೆತಂತಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.