ಗುಂಡ್ಲುಪೇಟೆಗೆ ಕಬಿನಿ ನೀರು ಸದ್ಯಕ್ಕೆ ಬರಂಗೆ ಕಾಣ್ತಿಲ್ಲ!ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕಬಿನಿ ನೀರು ಗುಂಡ್ಲುಪೇಟೆ ಪಟ್ಟಣದ ಬಂದು ತಿಂಗಳುಗಳೇ ಉರುಳುತ್ತಿದೆ. ಡಿಜಿಟಲ್ ಸ್ಟಾರ್ಟರ್ ರಿಪೇರಿ ಹಾಗೂ ಹೊಸ ಸ್ಟಾರ್ಟರ್ ಖರೀದಿಗೆ ಒಂದು ತಿಂಗಳಿಗೂ ಹೆಚ್ಚು ದಿನಾ ಬೇಕಾ? ಇದು ಪುರಸಭೆ ನಿರ್ಲಕ್ಷ್ಯವಲ್ಲದೇ ಮತ್ತೇನು? ಪುರಸಭೆಯಲ್ಲಿ ೨೩ ಮಂದಿ ಪುರಸಭೆ ಸದಸ್ಯರು ಇದ್ದರೂ ಕಬಿನಿ ಕುಡಿಯುವ ನೀರಿನ ವಿಚಾರದಲ್ಲಿ ಕೈಚೆಲ್ಲಿ ಕುಳಿತಿದ್ದರೆ,ಇತ್ತ ಚಾಮರಾಜನಗರ ಜಿಲ್ಲಾಡಳಿತ ಮಾತ್ರ ಕುಡಿಯುವ ನೀರಿನ ವಿಚಾರದಲ್ಲಿ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.