ಖಾಲಿ ಕೊಡಗಳ ಪ್ರದರ್ಶನವಾದ್ರೆ ಶಿಸ್ತು ಕ್ರಮಚಿತ್ರದುರ್ಗ: ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಕೂಡ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಎಲ್ಲಿಯಾದರೂ ಖಾಲಿ ಕೊಡಗಳ ಪ್ರದರ್ಶನ, ನೀರಿಗಾಗಿ ಪ್ರತಿಭಟನೆ ಎಂಬಿತ್ಯಾದಿ ದೃಶ್ಯಗಳು ಕಂಡು ಬಂದರೆ ಶಿಸ್ತುಕ್ರಮ ಜರುಗಿಸುವುದು ಗ್ಯಾರಂಟಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.