ಸಾರಾಂಶ
ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಹಿರಿಯ ಸದಸ್ಯ ನ್ಯಾಯವಾದಿ ಕೆ.ಕೆ.ಖೋತ ಅವರ ಮೇಲೆ ಇತ್ತೀಚೆಗೆ ಮಾರಣಾಂತಿಕ ಹಲ್ಲೆಯಾಗಿದೆ. ಈ ಘಟನೆಯನ್ನು ಖಂಡಿಸಿ ನ್ಯಾಯವಾದಿಗಳ ಸಂಘದ ಸದಸ್ಯರು ಕಾರ್ಯದರ್ಶಿ ಎಸ್.ಆರ್.ವಾಲಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಹಿರಿಯ ಸದಸ್ಯ ನ್ಯಾಯವಾದಿ ಕೆ.ಕೆ.ಖೋತ ಅವರ ಮೇಲೆ ಇತ್ತೀಚೆಗೆ ಮಾರಣಾಂತಿಕ ಹಲ್ಲೆಯಾಗಿದೆ. ಈ ಘಟನೆಯನ್ನು ಖಂಡಿಸಿ ನ್ಯಾಯವಾದಿಗಳ ಸಂಘದ ಸದಸ್ಯರು ಕಾರ್ಯದರ್ಶಿ ಎಸ್.ಆರ್.ವಾಲಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಚಿಕ್ಕೋಡಿ ನ್ಯಾಯವಾದಿಗಳ ಸಂಘ ಈ ಘಟನೆಯನ್ನು ಖಂಡಿಸುತ್ತಿದ್ದು ನ್ಯಾಯವಾದಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕಾನೂನು ಪ್ರಕಾರ ಕ್ರಮ ಜರುಗಿಸಿ ಅವರನ್ನು ಕೂಡಲೇ ಬಂಧಿಸಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.
ಸರ್ವಾನುಮತದಿಂದ ನಿರ್ಣಯಿಸಿ ಈ ಪ್ರಕಾರದ ಘಟನೆಗಳು ನ್ಯಾಯವಾದಿಗಳ ವಿರುದ್ಧ ಜರುಗಿಸದಂತೆ ಯೋಗ್ಯ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಇಲ್ಲವಾದಲ್ಲಿ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಘಟನೆ ಕುರಿತು ಪೊಲೀಸರು ತಕ್ಷಣ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧವೂ ಸಂಘ ಹೋರಾಟ ಮಾಡುವುದು ತಿಳಿಸಿದರು.ಈ ವೇಳೆ ಉಪಾಧ್ಯಕ್ಷ ಎನ್.ಡಿ.ದರಬಾರೆ, ಸಿ.ಬಿ.ಪಾಟೀಲ,ಬಿ.ಎನ್.ಪಾಟೀಲ, ಎಸ್.ಎಲ್.ಯರನಾಳೆ, ವ್ಹಿ.ಜಿ. ಮಾದಪ್ಪಗೋಳ, ಡಿ.ಆರ್.ಕೊಟೆಪ್ಪಗೋಳ, ಎಂ.ಜಿ.ಮೋಟನ್ನವರ, ಎಂ.ಬಿ.ಬಾನಿ, ಸಿ.ಆರ್.ಪಚಂಡಿ, ಎಸ್.ಎಂ.ದಿನ್ನಮನಿ ಹಾಗೂ ಮಹಿಳಾ ಪ್ರತಿನಿಧಿ ಎ.ಎ.ಚೌಗಲಾ ಸೇರಿದಂತೆ ಹಿರಿಯ ವಕೀಲರಾದ ಸತೀಶ ಕುಲಕರ್ಣಿ,ಆರ್.ಎ.ಖೋತ,ಸಿ.ಎಸ್.ಕೋರುಚೆ, ಎಂ.ಬಿ.ಪಾಟೀಲ, ಬಿ.ಆರ್.ಯಾದವ, ರವಿ ಹುದ್ದಾರ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
--ಕೋಟ್
ಚಿಕ್ಕೋಡಿಯ ಹಿರಿಯ ವಕೀಲರಾದ ಕೆ.ಕೆ.ಖೋತ ಅವರ ಮೇಲೆ ಆಗಿರುವ ಮಾರಣಾಂತಿಕ ಹಲ್ಲೆ ಚಿಕ್ಕೋಡಿ ವಕೀಲರಿಗೆ ಕರಾಳ ದಿನವಾಗಿದೆ. ಸಮಾಜಕ್ಕೆ ನ್ಯಾಯ ಒದಗಿಸಿಕೊಡುವ ವಕೀಲರಿಗೆ ನ್ಯಾಯಬೇಕೆಂದು ಸಾಮಾಜಿಕ ನ್ಯಾಯದಿನದಂದೇ ಬೀದಿಗಳಿದು ಹೋರಾಟ ಮಾಡಬೇಕಾಗಿರುವುದು ದುದೃಷ್ಟಕರ ಸಂಗತಿಯಾಗಿದೆ. ವಕೀಲರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಬೀದಿಗಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿರುವುದು ಖಂಡನಾರ್ಹ.-ಎಂ.ಬಿ.ಪಾಟೀಲ, ನ್ಯಾಯವಾದಿ ಚಿಕ್ಕೊಡಿ