ಶಾಹಿದ್ ತೆಂಕಿಲ್‌ಗೆ ಅಭಿನಂದನಾ ಸಮಾರಂಭ, ಸನ್ಮಾನ

| Published : Oct 16 2025, 02:01 AM IST

ಸಾರಾಂಶ

ಟಿ.ಎಂ. ಶಾಹಿದ್‌ ತೆಂಕಿಲ್‌ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಸನ್ಮಾನ ಸಂಪಾಜೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಂಪಾಜೆ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಂಕಿಲ್‌ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಸನ್ಮಾನ ಸಂಪಾಜೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸುಮತಿ ಶಕ್ತಿ ವೇಲು ವಹಿಸಿ ಟಿ.ಎಂ. ಶಾಹಿದ್ ತೆಂಕಿಲ್‌ ಅವರನ್ನು ಸನ್ಮಾನಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ .ಪಿ. ಜಗದೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಕುಮಾರ್, ಸೊಸೈಟಿ ನಿರ್ದೇಶಕ ಗಣಪತಿ ಭಟ್, ಸೊಸೈಟಿ ಉಪಾಧ್ಯಕ್ಷೆ ಯಮುನ ಬಿ ಎಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಜಗದೀಶ್ ರೈ ಎಸ್. ಕೆ, ಹನೀಫ್ ಅಬುಸಾಲಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್ ಕೆ ಹನೀಫ್, ಸದಸ್ಯರಾದ ಜಿ.ಕೆ ಹಮೀದ್ ಗೂನಡ್ಕ , ಸುಂದರಿ ಮುಂಡಡ್ಕ, ಸದಸ್ಯರಾದ ವಿಮಲಾ ಪ್ರಸಾದ್ ವಿಜಯಕುಮಾರ್ ಅನುಪಮಾ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿಕೆ ಹಮೀದ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂತಿ ಬಿ.ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.