ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಗ್ಯಾರಂಟಿ ಯೋಜನೆಯಗಳನ್ನು ಟೀಕಿಸುವ ಪ್ರತಿಪಕ್ಷದವರು, ತಮ್ಮ ಸರ್ಕಾರದ ಅವಧಿಯಲ್ಲಿ ಜನರಿಗೆ ಏನು ಕೊಟ್ಟಿರಿ ಎಂಬುದನ್ನು ಹೇಳಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಪ್ರಶ್ನಿಸಿದರು.ನಗರ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ, ಜನತಾದಳ ಸರ್ಕಾರ ಇದ್ದಾಗ ಜನರಿಗೆ ಏನು ಮಾಡಲಿಲ್ಲ. ಈಗ ಬಿಟ್ಟಿ ಭಾಗ್ಯ ಎನ್ನುತ್ತಿದ್ದಾರೆ. ನೀವು ಅಧಿಕಾರದಲ್ಲಿ ಇದ್ದಾಗ ಏನು ಕೊಟ್ಟಿದ್ದೀರಿ ಹೇಳಿ. ಪ್ರತಿಪಕ್ಷಗಳಿಗೆ ಪ್ರತ್ಯುತರ ನೀಡಲು ಇದು ಸಕಾಲ. ರಾಜ್ಯ ಸರ್ಕಾರದ ಸಾಧನೆ ಮತ್ತು ಗ್ಯಾರಂಟಿ ಯೋಜನೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ರಾಜ್ಯದಲ್ಲಿ ತಂದಿರುವ ಗ್ಯಾರಂಟಿ ಯೋಜನೆ, ದೇಶದ ಯಾವುದೇ ರಾಜ್ಯಗಳು, ವಿದೇಶಗಳಲ್ಲೂ ಉಚಿತವಾಗಿ ನೀಡಿಲ್ಲ. ಎಡಪಂಥೀಯ ಸರ್ಕಾರ ಇರುವ ದೇಶಗಳಲ್ಲೂ ಉಚಿತವಾಗಿ ಯೋಜನೆ ಜಾರಿಗೆ ತಂದಿಲ್ಲ. ಸಾರಿಗೆ ಬಸ್ ಗಳಲ್ಲಿ 500 ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎನ್ನುವುದು ದಾಖಲೆ ಎಂದರು.ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಮೈಸೂರಿನಲ್ಲಿ ನಡೆಯುವ ಸಾಧನಾ ಸಮಾವೇಶ ರಾಜ್ಯದ ಗಮನಸೆಳೆಯಬೇಕು. ಶೇ. 40ರಷ್ಟು ಕಮಿಷನ್ ಸರ್ಕಾರ ಅಂತ ಬಿಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಶೇ. 80 ರಷ್ಟು ಕಮಿಷನ್ ಸರ್ಕಾರ ಅಂತ ಅಪಪ್ರಚಾರ ಮಾಡಲಾಗುತ್ತಿದೆ. ಚಾಮರಾಜ ಕ್ಷೇತ್ರ ಒಂದಕ್ಕೆ 1900 ಕೋಟಿ ರೂ. ಅನುದಾನ ಕೊಡಲಾಗಿದೆ. ಇನ್ನೂ ಬೇರೆ ಕ್ಷೇತ್ರಕ್ಕೆ ಎಷ್ಟು ಕೋಟಿ ರೂ. ನೀಡಿರಬಹುದು ಎಂದು ಅವರು ಪ್ರಶ್ನಿಸಿದರು.ಈ ಸಮಾವೇಶ ಯಶಸ್ವಿಗೊಳಿಸಲು ನಗರದ ಮೂರು ಕ್ಷೇತ್ರಗಳಿಂದ ಸುಮಾರು 45 ಸಾವಿರ ಮಂದಿಯನ್ನು ಸೇರಿಸಬೇಕು. ಪಕ್ಷದ ಮುಖಂಡರು, ಪದಾಧಿಕಾರಿಗಳು ಕೂರಲು ಐದು ಸಾವಿರ ಆಸನವನ್ನು ಕಾಯ್ದಿರಿಸಲಾಗುವುದು ಎಂದರು.2000 ಕೋಟಿ ರು. ಅನುದಾನ
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಮೈಸೂರು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2600 ಕೋಟಿ ರೂ. ಅನುದಾನ ನೀಡಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಸಾಧನಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ಒಂದು ಲಕ್ಷ ಜನರನ್ನು ಸೇರಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಮೈಸೂರು ನಗರದ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ನೀಡಿದೆ ಎಂದರು.ಸರ್ಕಾರದಲ್ಲಿ ಹಣ ಇಲ್ಲವೆಂದು ಅಪಪ್ರಚಾರಮಾಡಿಕೊಂಡು ಬರಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ ಎನ್ನುವ ಮಾತನ್ನು ಹೇಳುವ ಪ್ರತಿಪಕ್ಷ ನಾಯಕರಿಗೆ ಅವರು ತಿರುಗೇಟು ನೀಡಿದರು.ಹೆಚ್ಚು ಭಾಗವಹಿಸಿಅಧ್ಯಕ್ಷತೆವಹಿಸಿದ್ದ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಮಾತನಾಡಿ, ಜು. 18 ರಂದು ಪಕ್ಷದ ಆವರಣದಲ್ಲಿ ನಡೆಯುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಮತ್ತು ಜು. 19ರಂದು ಕಾಂಗ್ರೆಸ್ ಸರ್ಕಾರ ನಗರಕ್ಕೆ ನೀಡಿರುವ ಯೋಜನೆಗಳ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿದೆ. ನಗರದ ಪ್ರದೇಶದ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವಂತೆ ಮಾಡಬೇಕು. ಯುವಕರನ್ನು ಹೆಚ್ಚು ಆಕರ್ಷಿಸಬೇಕು ಎಂದರು.ಕೆಪಿಸಿಸಿ ಸಂಯೋಜಕ ಎನ್. ಭಾಸ್ಕರ್, ನಗರ ಪ್ರಧಾನ ಕಾರ್ಯದರ್ಶಿ ಈಶ್ವರ್ ಚಕ್ಕಡಿ, ಮಾಜಿ ಮೇಯರ್ ಗಳಾದ ನಾರಾಯಣ್, ಆರಿಫ್ ಹುಸೇನ್, ಎಚ್.ಎನ್. ಶ್ರೀಕಂಠಯ್ಯ, ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ, ಪುಷ್ಪಲತಾ ಜಗನ್ನಾಥ್, ಪುರುಷೋತ್ತಮ್, ಬಿ.ಕೆ. ಪ್ರಕಾಶ್, ಮಾಜಿ ಉಪ ಮೇಯರ್‌ಬಿ. ಸಿದ್ದರಾಜು, ಶಾಂತಕುಮಾರಿ, ಇಂದಿರಾಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲು ರವಿ, ಎನ್.ಎಸ್. ಗೋಪಿನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಲೋಕೇಶ್ ಪಿಯಾ, ಕೆಪಿಸಿಸಿ ಸದಸ್ಯ ಎನ್. ಭಾಸ್ಕರ್, ರಮೇಶ್ ರಾಯಪ್ಪ, ಮಂಜುನಾಥ್, ನಿತಿನ್ ಗೋಪಿ, ಮನೋಜ್, ಪಲ್ಲವಿ ಬೇಗಂ, ಜಿಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಸೇವಾದಳ ಅಧ್ಯಕ್ಷ ಎಂ.ಕೆ. ಅಶೋಕ್, ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ಎನ್.ಆರ್. ನಾಗೇಶ್, ಡಿ. ನಾಗಭೂಷಣ್ ಮೊದಲಾದವರು ಇದ್ದರು.