8ರಂದು ಕುಂಭಶ್ರೀ ಆಂಗ್ಲಮಾಧ್ಯಮ ವಸತಿಶಾಲೆ, ಕಾಲೇಜು ವಾರ್ಷಿಕೋತ್ಸವಕುಂಭಶ್ರೀ ಸಂಸ್ಥೆಯ ಶಿಕ್ಷಣ ಪದ್ದತಿಯನ್ನು ಆಧರಿಸಿ ಹಲವು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ರಾಷ್ಟ್ರೀಯ ವಿದ್ಯಾ ಗೌರವ್ ರಾಷ್ಟ್ರೀಯ ಪ್ರಶಸ್ತಿ, ಸ್ಟಾರ್ ಆಫ್ ಏಷ್ಯಾ ರಾಷ್ಟ್ರೀಯ ಪ್ರಶಸ್ತಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಪ್ರಬುದ್ಧ ಭಾರತ್ ರಾಜ್ಯ ಪ್ರಶಸ್ತಿ, ವಿದ್ಯಾರತ್ನ ರಾಜ್ಯ ಪ್ರಶಸ್ತಿ, ಶಾರದಾ ಸೇವಾ ಪ್ರಶಸ್ತಿ ವೇಣೂರು ಹಾಗೂ ರಾಜ್ಯಮಟ್ಟದ ಶಿಕ್ಷಣ ಭೀಷ್ಮ ರಾಜ್ಯ ಪ್ರಶಸ್ತಿ ಸೇರಿದಂತೆ ನೂರಾರು ಕಡೆಗಳಲ್ಲಿ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದೆ.