ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವಶನಿವಾರ ಬೆಳಗ್ಗೆ ಉಷಾಃ ಪೂಜೆಯಾಗಿ ಬೆಳಗ್ಗಿನ ಪೂಜೆ, ನಾಗತಂಬಿಲ, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಸೇವೆ ನಡೆದು, ರಾತ್ರಿ ಪೂಜೆಯಾಗಿ ಪ್ರಸಾದ ವಿತರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು.