ಮಂಗಳೂರಿಗೆ ಈ ಋತುವಿನ ಮೊದಲ ಪ್ರವಾಸಿ ನೌಕೆ ಆಗಮನ ಎಂಎಸ್ ಸಿಲ್ವರ್ ವಿಸ್ಪರ್ ನೌಕೆ 186 ಮೀಟರ್ ಉದ್ದ, 6.20 ಮೀಟರ್ ಡ್ರಾಫ್ಟ್ ಮತ್ತು 28,258 ಒಟ್ಟು ಟನ್‌ಗಳನ್ನು ಹೊಂದಿದೆ. ಈ ಹಡಗು ಅಂತರಾಷ್ಟ್ರೀಯ ಪ್ರವಾಸದಲ್ಲಿದ್ದು, ಕೇಪ್ ಟೌನ್, ಮುಂಬೈ, ಮಂಗಳೂರು, ಕೊಲಂಬೊ ಪ್ರವಾಸ ನಡೆಸುತ್ತಿದೆ. ನೌಕೆಯಲ್ಲಿನ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.