ಧರ್ಮಸ್ಥಳ ಕ್ಷೇತ್ರದ ಆನೆ ಲತಾ ನಿಧನಲತಾ ಹೆಸರಿನ ೬೦ರ ಹರೆಯದ ಹೆಣ್ಣಾನೆ ಕ್ಷೇತ್ರದಲ್ಲೇ ಹುಟ್ಟಿ ಬೆಳೆದಿತ್ತು. ಕ್ಷೇತ್ರದಲ್ಲಿ ಪ್ರತಿವರ್ಷ ಆಚರಿಸಲಾಗುವ ನಡಾವಳಿ, ಜಾತ್ರೆ, ಪಟ್ಟಾಭಿಷೇಕ ಮಹೋತ್ಸವ, ದೀಪೋತ್ಸವದ ಮೆರವಣಿಗೆಗಳಲ್ಲಿ, ಸ್ವಾಮೀಜಿಯವರು, ಕೇಂದ್ರ, ರಾಜ್ಯದ ಮಂತ್ರಿಗಳು ಆಗಮಿಸಿದ ಸಂದರ್ಭಗಳಲ್ಲಿ ನಡೆಸಲಾಗುವ ಮೆರವಣಿಗೆಗಳಲ್ಲಿ ಲತಾ ಭಾಗಿಯಾಗುತ್ತಿದ್ದಳು.