ಸಾರಾಂಶ
ಪಟ್ಟಣದ ಎರಡನೇ ವಾರ್ಡಿನ ಆನಂದ ಜ್ಯೋತಿ ಕಾಲೋನಿಯಲ್ಲಿ ನಡೆದ ಕಂಡಾಯಗಳ ಉತ್ಸವ ಸಿದ್ದಪ್ಪಾಜಿ ಕೊಂಡೋತ್ಸವ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.
ಕನ್ನಡಪ್ರಭ ವಾರ್ತೆ ಹನೂರು ಪಟ್ಟಣದ ಎರಡನೇ ವಾರ್ಡಿನ ಆನಂದ ಜ್ಯೋತಿ ಕಾಲೋನಿಯಲ್ಲಿ ನಡೆದ ಕಂಡಾಯಗಳ ಉತ್ಸವ ಸಿದ್ದಪ್ಪಾಜಿ ಕೊಂಡೋತ್ಸವ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.
12 ವರ್ಷಗಳ ನಂತರ ನಡೆಯುತ್ತಿರುವ 78 ಹಳ್ಳಿಗಳ ಭಕ್ತರು ಭಾಗವಹಿಸುವ ಮೂಲಕ ಕಳೆದ ಎರಡು ದಿನಗಳಿಂದ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಇಡೀ ರಾತ್ರಿ ಭಾರಿ ಕಟ್ಟಿಗೆಗಳ ಉರಿದು ಕೆಂಡವಾಗಿದ್ದು, ವಾದ್ಯ ಮೇಳಗಳು ಸಂಭ್ರಮ ಸಡಗರದೊಂದಿಗೆ ಶನಿವಾರ ಬೆಳಗಿನ ಜಾವ ಕಂಡಾಯಗಳನ್ನು ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಇದನ್ನು ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.ಶಾಸಕ ಎಂಆರ್ ಮಂಜುನಾಥ್ ಪಟ್ಟಣದ ಆನಂದ ಜ್ಯೋತಿ ಕಾಲೋನಿಯಲ್ಲಿ ನಡೆಯುತ್ತಿರುವ ಕಡ್ಡಾಯ ಸಿದ್ದಪ್ಪಾಜಿ ಕೊಂಡೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತುಂತುರು ಹನಿಯಲ್ಲಿಯೂ ಶಾಸಕರು ಕಾಲೋನಿಯ ಮನೆ ಮನೆಗೆ ಭೇಟಿ ನೀಡಿ ಪ್ರತಿ ಮನೆಯ ಕುಟುಂಬದವರಿಗೆ ಶುಭಾಶಯ ಕೋರಿದರು. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕಂಡಾಯ ಮೆರವಣಿಗೆ ಮತ್ತು ಕೊಂಡೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಪಟ್ಟಣ ಪೊಲೀಸರು ಬಂದೋಬಸ್ ಕಲ್ಪಿಸಿದ್ದರು.