ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸಹಕಾರ ಕ್ಷೇತ್ರಗಳ ಪ್ರಗತಿ ಸರ್ಕಾರದ ಜೊತೆಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ರೆಸಾರ್ಟ್ ಒಂದರಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆಯಿಂದ ಜಿಲ್ಲೆಯ ಹಾಲು ಒಕ್ಕೂಟದ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಸ್ಥೆಗಳ ಮೂಲಕ ಡೇರಿಗಳಿಗೆ ಸಾಮಾನ್ಯ ಸಾಫ್ಟ್‌ವೇರ್ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.ಕೋಮುಲ್, ಡಿಸಿಸಿ ಸಾಧನೆ
ದೇಶದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಾಧನೆ ಮನೆ ಮಾತಾಗಿದ್ದ ಡಿಸಿಸಿ ಬ್ಯಾಂಕ್‌ಗೆ ಆಡಳಿತ ಮಂಡಳಿ ಇಲ್ಲದಿರುವುದು, ಮಹಿಳಾ ಸಂಘಗಳಿಗೆ ಸಾಕಷ್ಟು ತೊಂದರೆ ಎದುರಾಗಿದೆ. ಜಿಲ್ಲೆಯ ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರಗಳು ಉತ್ತಮ ಸಾಧನೆಯ ಮೂಲಕ ಎತ್ತರದಲ್ಲಿವೆ. ಕೋಮುಲ್ ಒಕ್ಕೂಟವೂ ನಾನಾ ಕಾರ್ಯಕ್ರಮಗಳನ್ನು ಹಾಲು ಉತ್ಪಾದಕರಿಗೆ ನೀಡುವ ಮೂಲಕ ಇತಿಹಾಸ ಪುಟಗಳಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.ರಾಜ್ಯದ ಹಾಲು ಒಕ್ಕೂಟಗಳಲ್ಲಿ ಮಂಗಳೂರು ಒಕ್ಕೂಟ ಬಿಟ್ಟರೆ, ಹಾಸನ ಬೆಂಗಳೂರು ಜಿಲ್ಲೆಗಳು ಸಹ ಹಾಲಿನ ದರ ಹೆಚ್ಚಳ ಮಾಡಿಲ್ಲ, ಕೋಲಾರ ಹಾಲು ಒಕ್ಕೂಟ ಹೆಚ್ಚಿನ ದರವನ್ನು ನೀಡಲಾಗುತ್ತಿದೆ, ಹಾಲು ಉತ್ಪಾದಕರ ಸಂಖ್ಯೆಯು ಹೆಚ್ಚಾಗಿದೆ. ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತಗೊಳಿಸಿ, ಸಹಕಾರ ಕ್ಷೇತ್ರದಲ್ಲಿನ ರಾಜಕಾರಣ ಮಾಡಿದರೆ ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದರು.
ಚಿಮುಲ್‌ಗೆ ಚುನಾವಣೆ ನಡೆದಿಲ್ಲಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಕೋಲಾರ ಒಕ್ಕೂಟ ವಿಭಜನೆ ನಂತರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚಿಮುಲ್‌ಗೆ ಚುನಾವಣೆ ನಡೆದಿಲ್ಲ, ಇನ್ನು ವರ್ಷ ಆದರೂ ಸಹ ಮಾಡಲು ಸಾಧ್ಯವಿಲ್ಲ, ಕೋಮುಲ್ ಡೇರಿ ಚುನಾವಣೆಯನ್ನು ಒಗ್ಗಟ್ಟಿನಿಂದ ಕೋಲಾರ ಆಡಳಿತ ಮಂಡಳಿ ಬರಬೇಕು ಆಡಳಿತ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಬಾರದೆಂದು ಸಹಕಾರಿಗಳು ಒಗ್ಗಟ್ಟಿನಿಂದ ಮಾಡಿದ್ದು ಕೋಮುಲ್ ಚುನಾಯಿತು ಆಡಳಿತ ಮಂಡಳಿ ನಡೆಯುತ್ತಿದೆ ಎಂದರು.
ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಹಾಲು ಒಕ್ಕೂಟದಿಂದ ಡೇರಿಗಳಿಗೆ ಗುಣಮಟ್ಟದ ಮೇಲೆ ಹಾಲಿನ ದರ ನೀಡುತ್ತಿಲ್ಲ. ಕೆಲವೊಂದು ಡೇರಿಗಳಲ್ಲಿ ಗುಣಮಟ್ಟದ ಹಾಲಿಗೆ ತಕ್ಕಂತೆ ದರ ನೀಡಲಾಗುತ್ತಿದೆ, ಹೀಗಾಗಿ ಹಾಲೂ ಉತ್ಪಾದಕರು ಸಹ ಗುಣಮಟ್ಟದ ಹಾಲನ್ನು ಡೇರಿಗಳಿಗೆ ನೀಡುವ ಮೂಲಕ ಹೆಚ್ಚಿನ ದರವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.ಹಾಲಿನ ಗುಣಮಟ್ಟ ಕಾಪಾಡಿಗುಣಮಟ್ಟ ಇಲ್ಲದ ಹಾಲಿನಿಂದ ಒಕ್ಕೂಟ ಮತ್ತು ರೈತರಿಗೆ ಇಬ್ಬರಿಗೂ ಸಹ ತೊಂದರೆಯಾಗುತ್ತಿದೆ ಎಂದು ಹೇಳಿದಲ್ಲದೆ, ಕೆಎಂಎಫ್ ಹಾಲು ಒಕ್ಕೂಟ, ಹಾಗೂ ಯೂನಿಯನ್, ಡೇರಿಗಳು ಒಬ್ಬರನ್ನೊಬ್ಬರು ಅವಲಂಬಿಸಿದ್ದಾರೆ, ಅಧಿಕಾರಿಗಳಾಗುವ ವಿಸ್ತರಣಾಧಿಕಾರಿಗಳು ಮುತುವರ್ಜಿ ವಹಿಸಿ ಸಾಫ್ಟ್‌ವೇರ್ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು. ರೈತರಿಗೆ ಸೌಲಭ್ಯ ಕಲ್ಪಿಸಿ
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಡಿ.ಆರ್ ರಾಮಚಂದ್ರಗೌಡ ಮಾತನಾಡಿ, ಕೆಎಂಎಫ್ ಮತ್ತು ಡಿ.ಸಿ.ಸಿ ಬ್ಯಾಂಕ್ ಜಿಲ್ಲೆಯ ರೈತರ ಮತ್ತು ಮಹಿಳೆಯರ ಎರಡು ಕಣ್ಣುಗಳು ಇದ್ದಂತೆ, ಅಧಿಕಾರಿಗಳು ರೈತರಿಗೆ ಒಕ್ಕೂಟದಿಂದದ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಒಕ್ಕೂಟಕ್ಕೆ ಗುಣಮಟ್ಟದ ಹಾಲನ್ನು ನೀಡುವಂತೆ ಜಾಗೃತಿ ಮೂಡಿಸಬೇಕು. ಸಹಕಾರ ಕ್ಷೇತ್ರಗಳು ಎಂದಿಗೂ ಸಹ ರಾಜಕೀಯ ಮುಕ್ತವಾಗಿ ಇರಬೇಕೆಂದು ತಿಳಿಸಿದರು.ಸಭೆಯಲ್ಲಿ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಹೆಚ್.ವಿ ನಾಗರಾಜ್, ಎ.ಸಿ ನಾಗರಾಜ್, ಕಾಂತಮ್ಮ, ಬಿ.ವಿ ಸಾಮೇಗೌಡ, ಬಿ. ರಮೇಶ್, ಕೆ.ಕೆ.ಮಂಜು, ಶ್ರೀನಿವಾಸ್, ಯೂನಿಸ್ ಷರಿಫ್, ಉರಿಗಿಲಿ ರುದ್ರುಸ್ವಾಮಿ, ಅ.ಮು ಲಕ್ಷ್ಮೀನಾರಾಯಣ, ಮೂರಾಂಡಹಳ್ಳಿ ಗೋಪಾಲಪ್ಪ, ಪೆಮ್ಮಶೆಟ್ಟಹಳ್ಳಿ ಸುರೇಶ್, ಪಾಕರಹಳ್ಳಿ ವೆಂಕಟೇಶ್ ಮತ್ತಿತರರು ಇದ್ದರು.