ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳರಂಗ ಸಂಸ್ಕೃತಿ ಕಾರ್ಕಳ ದಶರಂಗ ಸಂಭ್ರಮ ರಾಜ್ಯಮಟ್ಟದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಸುರಭಿ ಬೈಂದೂರು ಇವರಿಂದ ಗಣೇಶ್ ಮಂದಾರ್ತಿ ನಿರ್ದೇಶನದ ಸತ್ಯನಾ ಕೊಡೇರಿಯವರ ರಂಗ ಪರಿಕರದಲ್ಲಿ ಚೋಮನ ದುಡಿ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮವನ್ನು ಏರ್ ವೈಸ್ ಮಾರ್ಷಲ್ ಕ್ಯಾಪ್ಟನ್ ರಮೇಶ್ ಕಾರ್ಣಿಕ್, ತುಕಾರಾಮ ನಾಯಕ್, ಭಾಸ್ಕರ ಕಾರಂತ ಉದ್ಘಾಟಿಸಿದರು. ರಂಗ ಸಂಸ್ಕೃತಿ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಕೆ.ಬಿ.ಕೀರ್ತನ್ ಕುಮಾರ್, ಪ್ರೊ.ಶ್ರೀವರ್ಮ ಆಜ್ರಿ ಉಪಸ್ಥಿತರಿದ್ದರು.
ಅನ್ವಿ ಎಚ್. ಅಂಚನ್ ಅವರಿಂದ ಯೋಗ ನೃತ್ಯ ಪ್ರದರ್ಶನ ನಡೆಯಿತು. ಸಾಹಿತ್ಯ ಲೋಕದ ಬಾಲ ಪ್ರತಿಭೆ ಅದಿತಿ ಮುದ್ರಾಡಿ ಅವರನ್ನು ಗೌರವಿಸಲಾಯಿತು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಶಿವಸುಬ್ರಹ್ಮಣ್ಯ ಭಟ್ ಸಹಕರಿಸಿದರು.------
ನಾಟಕ ಪರಿಣಾಮಕಾರಿ ಕಲಾ ಮಾಧ್ಯಮ: ಡಾ. ಮಂಜುನಾಥ ಕೋಟ್ಯಾನ್ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಟಕ ಪರಂಪರೆಯು ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಅಭಿಪ್ರಾಯಪಟ್ಟರು.ಅವರು ರಂಗಸಂಸ್ಕೃತಿಯ ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ನಾಟಕೋತ್ಸವ ‘ದಶರಂಗ ಸಂಭ್ರಮ’ದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕನ್ನಡ ನಾಟಕ ಪರಂಪರೆಯು ಶ್ರೇಷ್ಠ ಕಾವ್ಯಗಳನ್ನು ನಾಟಕವನ್ನಾಗಿಸುವ ವಿಶೇಷವಾದ ಪರಿಕಲ್ಪನೆಯನ್ನು ಹೊಂದಿದೆ. ನಾಡಿನ ಕಲಾ ರಸಿಕರಿಗೆ ಸದಭಿರುಚಿಯ ರಸಾಸ್ವಾದನೆಯನ್ನು ನೀಡಿದೆ. ರಂಗಭೂಮಿ ಪರಿಕಲ್ಪನೆಯು ಆರಂಭಕಾಲದಿಂದ ತೊಡಗಿ ಇಂದಿನ ವರೆಗೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದೆ ಎಂದರು.ನಾಟಕವು ವಿಶೇಷವಾದ ಒಂದು ಪ್ರೇಕ್ಷಕ ವರ್ಗವನ್ನು ಹೊಂದಿದೆ. ನಾಟಕದ ಎಲ್ಲ ಆಯಾಮಗಳು ಸಹೃದಯರ ಮನವನ್ನು ಗೆದ್ದಿದೆ. ಹಾಗೆಯೇ ನಾಟಕವನ್ನು ನೋಡುವಂತಹ ಸಹೃದಯಿಯು ಕೂಡ ನಾಟಕದೊಳಗೆಯೇ ತಾನು ಕೂಡ ಒಬ್ಬ ಪಾತ್ರಧಾರಿಯಾಗಿ ಗುರುತಿಸಿಕೊಳ್ಳುವಂತಹ ತೊಡಗಿಸಿಕೊಳ್ಳುವಿಕೆಯು ಪ್ರೇಕ್ಷಕರಿಗೆ ಇದೆ. ಇಂತಹ ಒಳ್ಳೆಯ ಕಲಾ ರಸಿಕತೆಯನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ರಂಗಸಂಸ್ಕೃತಿಯು ಕಾರ್ಕಳದ ಪರಿಸರದಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಾಟಕೊತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಸಂಸ್ಕೃತಿಯ ಅಧ್ಯಕ್ಷ ಎಸ್.ನಿತ್ಯಾನಂದ ಪೈ ವಹಿಸಿದ್ದರು. ಯಕ್ಷಕಲಾ ರಂಗದ ಅಧ್ಯಕ್ಷ ವಿಜಯ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕಿ ಹರ್ಷಿಣಿ ಕೆ., ರಂಗಸಂಸ್ಕೃತಿಯ ಸಹ ಕಾರ್ಯದರ್ಶಿ ರಾಮಚಂದ್ರ ನೆಲ್ಲಿಕಾರ್, ಸಂಚಾಲಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಶಿವ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ನಾಗೇಶ್ ನಲ್ಲೂರು ನಿರೂಪಿಸಿದರು. ಗಣೇಶ್ ಜಾಲ್ಸೂರು ವಂದಿಸಿದರು.
ಆರಂಭದಲ್ಲಿ ‘ವಿಹಾನಾ’ ಮೆಲೋಡೀಸ್ ತಂಡದ ನಿರ್ದೇಶಕಿ, ಗಾಯಕಿ ರಮ್ಯಾ ಸುಧೀಂದ್ರ ಮತ್ತು ಗಾಯಕ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಹಳೆಯ ಹಾಡುಗಳನ್ನು ಹಾಡಿ ರಂಜಿಸಿದರು.ಉದ್ಘಾಟನಾ ಕಾರ್ಯಕ್ರಮದ ನಂತರ ‘ನಟನ ಮೈಸೂರು’ ತಂಡ ಅಭಿನಯಿಸಿದ ಡಾ. ಶ್ರೀಪಾದ ಭಟ್ ನಿರ್ದೇಶನದ ‘ಕಣಿವೆಯ ಹಾಡು’ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))