ಸಾರಾಂಶ
ಜಗಳೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಇತರರು ಇದ್ದರು.
ಕನ್ನಡ ಪ್ರಭವಾರ್ತೆ ಜಗಳೂರು
ನಾಡಿನ ನೆಲ,ಜಲ ಸಂರಕ್ಷಣೆ ವಿಚಾರದಲ್ಲಿ ಮಹಿಳೆ ಪುರಷನಷ್ಟೆ ಸಮಾನವಾಗಿ ಹೋರಾಟ ಮಾಡಬಲ್ಲಳು ಎಂದು ವೀರ ವನಿತೆ ಒನಕೆ ಓಬವ್ವ ಸಾಧಿಸಿ ತೋರಿಸಿದ್ದಾರೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ಛಲವಾದಿ ಸಮಾಜ ಸಹಯೋಗದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗದ ಪಾಳೇಗಾರರ ಸಂಸ್ಥಾನದಲ್ಲಿ ಕಹಳೆ ಊದುವ ಮುದ್ದ ಹನುಮಪ್ಪ ಹೆಂಡತಿ ಓಬವ್ವ ತನ್ನ ಸ್ವಾಮಿ ನಿಷ್ಟೆ ಹಾಗೂ ಸಾಮ್ರಾಜ್ಯದ ಉಳುವಿಗೆ ಹೋರಾಟ ಮಾಡಿ ಶತ್ರುಗಳನ್ನ ತನ್ನ ಒನಕೆ ಮೂಲಕ ಸೆದು ಬಡಿದು ವೀರಾ ವೇಷದಿಂದ ನಾಡು ಉಳಿಸಲು ಶ್ರಮ ಪಟ್ಟರು ಹಾಗೇಯೇ ಈಗಿನ ವಿದ್ಯಾರ್ಥಿಗಳು ಸಹ ಓಬವ್ವ ಅವರಂತಹ ಶೌರ್ಯ ಮತ್ತು ಸಮಯ ಪ್ರಜ್ಞೆ ಬೆಳಿಸಿಕೊಳ್ಳಬೇಕು ಎಂದು ಹೇಳಿದರು.ಒನಕೆ ಓಬವ್ವನ ಜೀವನ ಚರಿತ್ರೆ ಕುರಿತು ಮಾತನಾಡಿದ ಉಪನ್ಯಾಸಕಿ ಸ್ವಪ್ನ, ಯಾವುದೇ ಯುದ್ದದ ತರಬೇತಿ ಪಡೆಯದೆ ಅಂದಿನ ಕಾಲದಲ್ಲಿ ಸಾಮ್ರಾಜ್ಯದ ಉಳಿಸಲು ತನ್ನ ಗಂಡನ ಊಟದ ಸಮಯ ಹಾಳು ಮಾಡದೇ ಒನಕೆ ಮೂಲಕ ಶತ್ರುಗಳನ್ನು ಸದೆ ಬಡೆಯುವಂತಹ ಎದೆಗಾರಿಕೆ ಬೆಳೆಸಿಕೊಂಡಿದ್ದ ಧೀಮಂತ ನಾಯಕಿಯನ್ನು ಸಮಾಜಕ್ಕೆ ಪರಿಚಯಿಸಲು ಸರ್ಕಾರ ರಾಷ್ಟ್ರೀಯ ಹಬ್ಬಗಳ ಆಚರಣೆ ನೆಪದಲ್ಲಿ ಜಯಂತೋತ್ಸವ ಮಾಡಿ ಇಂದಿನ ಮಕ್ಕಳಿಗೆ ಪರಿಚಯಿಸುವಂತಹ ಕಾರ್ಯ ಮಾಡುತಿದೆ ಎಂದು ಹೇಳಿದರು. ಇದೇ ವೇಳೆ ಸಮಾಜ ಕಲ್ಯಾಣ ಅಧಿಕಾರಿ ಪರಮೇಶ್ವರಪ್ಪ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಸಿ.ತಿಪ್ಪೇಸ್ವಾಮಿ, ಒನಕೆ ಓಬವ್ವ ಹಟ್ಟು ಹಾಗೂ ಬೆಳೆದು ಬಂದ ದಾರಿ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಎಚ್.ಬಿ.ನಿಜಲಿಂಗಪ್ಪ, ನಿವೃತ್ತ ಸಮಾಜ ಕಲ್ಯಾಧಿಕಾರಿ ಬಿ.ಮಹೇಶ್ವರಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ವೀರಸ್ವಾಮಿ, ಕಾಲೇಜ್ ಪ್ರಾಂಶುಪಾಲರು ಜಗದೀಶ್, ಡಿ.ಡಿ.ಹಾಲಪ್ಪ ಹಿರಿಯ ಉಪನ್ಯಾಸಕ ಮಂಜುನಾಥ್ ರೆಡ್ಡಿ, ಹಟ್ಟಿ ತಿಪ್ಪೇಸ್ವಾಮಿ, ಧನ್ಯಕುಮಾರ್, ಬಿ.ಸತೀಶ್, ಕುಬೇಂದ್ರಪ್ಪ, ಮಾದಿಹಳ್ಳಿ ಮಂಜಪ್ಪ, ರಾಜಣ್ಣ, ಕುಮಾರ್, ನಾಗೇಶ್, ಮಂಜಣ್ಣ, ಹನುಮಂತಪ್ಪ, ಮೈಲಾರಪ್ಪ, ಬಿ.ಸಿ.ಎಂ.ಇಲಾಖೆ ದೇವೇಂದ್ರಪ್ಪ ಸೇರಿ ಅನೇಕರಿದ್ದರು.