ಕಸಾಪದಿಂದ ನವೆಂಬರ್‌ನಲ್ಲಿ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ: ಚಾ.ಶಿ.ಜಯಕುಮಾರ್

| Published : Nov 11 2024, 11:48 PM IST

ಕಸಾಪದಿಂದ ನವೆಂಬರ್‌ನಲ್ಲಿ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮ: ಚಾ.ಶಿ.ಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

1915ರಲ್ಲಿ ಆರಂಭವಾದ ಸಾಹಿತ್ಯ ಪರಿಷತ್ ದೆಹಲಿಯಿಂದ ಹಿಡಿದು ಮಂಡ್ಯದ ವರೆಗೆ 109 ವರ್ಷಗಳಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ನಗರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಸುತ್ತಿದೆ. 3 ದಿನಗಳ ಕಾಲ ನಡೆಯುವ ಆ ಅಕ್ಷರ ಬೃಹತ್ ಜಾತ್ರೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡತವನ್ನು ತೋರಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ನೆನೆಯಲು ಕನ್ನಡ ಸಾಹಿತ್ಯ ಪರಿಷತ್ ನವೆಂಬರ್ ತಿಂಗಳಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಿವೃತ್ತ ಕನ್ನಡ ಶಿಕ್ಷಕ ಚಾ.ಶಿ.ಜಯಕುಮಾರ್ ತಿಳಿಸಿದರು.

ತಾಲೂಕಿನ ಮಾರ್ಗೋನಹಳ್ಳಿ ಶ್ರೀ ಮರಡಿಲಿಂಗೇಶ್ವರ ದೇವಸ್ಥಾನದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಶಾಲೆಗೊಂದು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕನ್ನಡದ ಏಕೀಕರಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಅವಿರತ ಶ್ರಮಿಸಿದೆ. ಸರ್ಕಾರ ಆಯೋಜಿಸಿದ್ದ ಶತಕಂಠ ಗಾಯನದ ಕಾರ್ಯಕ್ರಮದಲ್ಲಿ ಇಡೀ ಕನ್ನಡದ ಪರಿಸರ, ನೆಲ ಜಲ, ವಾಸ್ತುಶಿಲ್ಪವು ಕನ್ನಡಿಗರ ಮನಸಿನಲ್ಲಿ ತುಂಬುವಂತೆ ಮಾಡಿದರು ಎಂದರು.

1915ರಲ್ಲಿ ಆರಂಭವಾದ ಸಾಹಿತ್ಯ ಪರಿಷತ್ ದೆಹಲಿಯಿಂದ ಹಿಡಿದು ಮಂಡ್ಯದ ವರೆಗೆ 109 ವರ್ಷಗಳಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ನಗರದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಸುತ್ತಿದೆ. 3 ದಿನಗಳ ಕಾಲ ನಡೆಯುವ ಆ ಅಕ್ಷರ ಬೃಹತ್ ಜಾತ್ರೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡತವನ್ನು ತೋರಿಸಬೇಕು ಕರೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಮುಖ್ಯ ಶಿಕ್ಷಕ ರಾಜೇನಹಳ್ಳಿ ಪದ್ಮೇಶ್ ಮಾತನಾಡಿ, ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಸಾಹಿತ್ಯದ ಬಗ್ಗೆ, ಹೆಸರಾಂತ ಕವಿಗಳ ಬಗ್ಗೆ ವಿಶೇಷ ಉಪನ್ಯಾಸಗಳನ್ನು ಆಯೋಜಿಸುತ್ತಿದೆ ಎಂದರು.

ವಸತಿ ಶಾಲೆ ಪ್ರಾಂಶುಪಾಲ ಎಲ್.ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹರಿರಾಯನಹಳ್ಳಿ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಬಿ.ಆರ್.ರಾಮಚಂದ್ರು, ಅಗ್ರಹಾರಬಾಚಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ಎಸ್.ನಂಜಪ್ಪ, ಪರಿಷತ್‌ನ ಹಿರಿಯ ಪ್ರಮುಖ್ ಕೆ.ಜೆ.ನಾಗಣ್ಣ, ವಸತಿ ಶಾಲೆ ನಿಲಯಪಾಲಕ ಸಿ.ಕೆ.ಧನಂಜಯಕುಮಾರ್, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಎಂ.ಎಸ್.ಸುನೀಲ್‌ ಕುಮಾರ್, ವಸತಿ ಶಾಲೆ ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.