ಸಾರಾಂಶ
ಹಾವೇರಿ: ಹಿಂದೂ ಅಂದರೆ ಸತ್ಯ ಸನಾತನ, ಬೇರೆ ಧರ್ಮಗಳು ಹುಟ್ಟುವ ಮುನ್ನ ಇದ್ದದ್ದೇ ಹಿಂದೂ ಧರ್ಮ. ಭಾರತದಲ್ಲಿರುವ ಪ್ರತಿಯೊಬ್ಬ ಹಿಂದೂನೇ, ಮುಸ್ಲಿಮರು ಹಿಂದೂಗಳೇ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮ ಹಿಂದೂವಿನ ಭಾಗವಾಗಿದ್ದು, ಆರ್ಯರೂ ಹಿಂದೂ ಭಾಗವೇ, ಹಿಂದೂಗೆ ಬಾರ್ಡರ್ ಅಂತ ಇಲ್ಲ. ಜಗತ್ತಿನ ಸಿದ್ಧಾಂತ, ತತ್ವಗಳಿಗೆ ಹಿಂದೂ ಧರ್ಮ ಮೂಲವಾಗಿದ್ದು, ಶ್ರೀಲಂಕಾ-ಅಪಘಾನಿಸ್ತಾನ ದೇಶದವರೆಲ್ಲ ಹಿಂದೂಗಳೇ ಎಂದರು.ಆಚರಣೆಗಳು ಮನೇಲಿ ಇರಬೇಕು, ದೇಶ ಸಮುದಾಯ ಅಂತ ಬಂದಾಗ ನಾವೆಲ್ಲ ಹಿಂದೂಗಳು. ಬೇರೆ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಪ್ರಸ್ತಾವನೆ ಮಾಡಲ್ಲ. ಹಿಂದೂ ಅಂದರೆ ಶುದ್ಧವಾದ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದರು.ಕಲ್ಲು ನಾಗರಕ್ಕೆ ಹಾಲೆರೆಯುವ ಪದ್ಧತಿ ಬದಲು ಅನಾಥ ಮಕ್ಕಳಿಗೆ ಹಾಲು ಕೊಡಿ ಎಂಬ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀವು ಮಾಡಿಕೊಂಡು ಹೋಗಿ, ಬೇಡ ಅಂದವರು ಯಾರು? ಹಾಲು ಕೊಡೋ ತಾಯಿ ಹತ್ಯೆ ಮಾಡ್ತಾ ಇದಾರೆ, ಎಷ್ಟು ಜನ ಸ್ವಾಮಿಗಳು ಗೋ ಹತ್ಯೆ ವಿರೋಧಿಸಿರಿ? ಅನಾಥ ಮಕ್ಕಳ ಮೇಲೆ ಕರುಣೆ ಇದ್ದರೆ ಹಾಲು ಕೊಡಿ ಎಂದರು.ಬಸವಣ್ಣನವರು ಬ್ರಾಹ್ಮಣರು, ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ಧಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯ್ತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ಹೇಳಿದರು.ವೀರಶೈವ- ಲಿಂಗಾಯತರು ಒಂದಾಗಲಿ: ಕೆಲವರ ಜಾತಿ ಪ್ರಮಾಣಪತ್ರಗಳಲ್ಲಿ ಹಿಂದೂ ಬೌದ್ಧ, ಹಿಂದೂ ಜೈನ ಅಂತ ಇದೆ. ಲಿಂಗಾಯತ ಇರಲಿ, ವೀರಶೈವ ಇರಲಿ ಇಬ್ಬರೂ ಒಂದಾಗಿ ಹೋಗಬೇಕು. ಒಂದಾಗದೇ ಹೇಗೆ ಪ್ರತ್ಯೇಕ ಧರ್ಮ ಮಾಡಬೇಕು? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ? ಕೆಲವು ಸ್ವಾಮಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ಲಾ? ಹಾಗೆ ಹೇಳುವ ಸ್ವಾಮಿಗಳಿಗೆ ಅವರ ಸರ್ಟಿಫಿಕೆಟ್ ತೋರಿಸಿ ಅಂತ ವಚನಾನಂದ ಶ್ರೀ ಸವಾಲು ಹಾಕಿದರು.
;Resize=(128,128))
;Resize=(128,128))