ನಾಳೆ ಕುಲಾಂತರಿ ತಳಿ ವಿರೋಧಿಸಿ ರೈತರ ಪ್ರತಿಭಟನೆ

| Published : Sep 25 2024, 12:51 AM IST

ಸಾರಾಂಶ

ಕುಲಾಂತರಿ ಬೆಳೆಗಳ ಪರ ದೊಡ್ಡ ಪ್ರಚಾರ ಆಂದೇಲನವೇ ನಡೆಯುತ್ತಿದೆ. ಉತ್ತಮ ಪೌಷ್ಟಿಕ ಆಹಾರ, ಕೀಟ ಭಾದೆಯಿಂದ ರಕ್ಷಣೆ ಮತ್ತು ರೈತರಿಗೆ ಹೆಚ್ಚಿನ ಇಳುವರಿ, ಅಲ್ಲದೆ ಎಂತಹ ವಾತಾವರಣದಲ್ಲಿ ಬೇಕಾದರೂ ಬೆಳೆಯುತ್ತದೆ ಎಂಬಿತ್ಯಾದಿ ಕಥೆಗಳನ್ನು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸ್ಥಳೀಯ ಬೇಸಾಯದ, ಜನ ಸಮುದಾಯದ ಮೇಲೆ ದುಷ್ಪರಿಣಾಮ ಬೀರುವ ನಿದೇಶಿ ಕಂಪನಿಗಳ ಕುಲಾಂತರಿ ಬೆಳೆಗಳ ವಿರುದ್ಧ ಹಿಂದಿನಿಂದಲೂ ದೊಡ್ಡಮಟ್ಟದ ವಿರೋಧ ವ್ಯಕ್ತವಾಗುತ್ತಿದೆ. ಕುಲಾಂತರಿ ತಳಿ ವಿರೇಧಿಸಿ ರೈತರು ಸೆ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಸ್ವಾಮಿ)ಯ ಜಿಲ್ಲಾಧ್ಯಕ್ಷ ಎಂ.ಆರ್. ಲಕ್ಷ್ಮೀ ನಾರಾಯಣ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಾಭಕೋರ ಸಂಸ್ಥೆಗಳು ತಮ್ಮ ಪಟ್ಟನ್ನು ಬಿಡದೆ ಮತ್ತೆ ಕುತಾಂತರಿ ತಳಿ ಹೇರುವ ಪಯತ್ನವನ್ನು ಮುಂದುವರೆಸುತ್ತಲೇ ಇವೆ. ಇವರ ಜೊತೆಗೆ ಸರ್ಕಾರದ ಕೆಲವು ನೀತಿ ನಿರೂಪಕರು ಕೂಡ ಸೇರಿಕೊಂಡು, ದೇಶದ ಆಹಾರದ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದರು.

ಎಚ್ಚರ ತಪ್ಪಿದರೆ ಕೃಷಿ ವ್ಯವಸ್ಥೆ ಕುಸಿತ

ಕುಲಾಂತರಿ ಬೆಳೆಗಳ ಪರ ದೊಡ್ಡ ಪ್ರಚಾರ ಆಂದೇಲನವೇ ನಡೆಯುತ್ತಿದೆ. ಉತ್ತಮ ಪೌಷ್ಟಿಕ ಆಹಾರ, ಕೀಟ ಭಾದೆಯಿಂದ ರಕ್ಷಣೆ ಮತ್ತು ರೈತರಿಗೆ ಹೆಚ್ಚಿನ ಇಳುವರಿ, ಅಲ್ಲದೆ ಎಂತಹ ವಾತಾವರಣದಲ್ಲಿ ಬೇಕಾದರೂ ಬೆಳೆಯುತ್ತದೆ ಎಂಬಿತ್ಯಾದಿ ಕಥೆಗಳನ್ನು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ. ಆದರೆ ನಾಗರೀಕರಾದ ನಾವು ಸಲ್ಪ ಎಚ್ಚರ ತಪ್ಪಿದರು ದೇಶದ ಆಹಾರ ಪೂರೈಕೆ ವ್ಯವಸ್ಥೆ ಮತ್ತು ಕೃಷಿ ಪರಿಸರದಲ್ಲಿ ಅಲ್ಲೋಲ ಕಲ್ಲೋಲವಾಗುವ ಸಾದ್ಯತೆ ಇದೆ ಎಂದರು.

ಕುಲಾಂತರಿ ಪರವಾಗಿರುವವರು ಏನೇ ಗುಣಗಾನ ಮಾಡಿದರೂ ವಾಸ್ತವದಲ್ಲಿ, ಚಾಲ್ತಿಯಲ್ಲಿರುವ ಶೇ.99ರಷ್ಟು ಕುಲಾಂತರಿ (ಜಿಎಂ)ಬೆಳೆಗಳು ಎರಡು ರೀತಿಯ ಲಕ್ಷಣಗಳನ್ನು ಮಾತ್ರ ಹೊಂದಿವೆ. ಒಂದು ಸಸ್ಯದೊಳಗೇ ಕೀಟನಾಶಕ ಉತ್ಪಾದನೆ ಮಾಡುವುದು, ಎರಡು ಅಪಾಯಕಾರಿ ಕಳೆನಾಶಕ ಸಿಂಪಡಿಸಿದರೂ ಬೆಳೆಗೆ ಏನು ಆಗದಂತೆ ವಿಷಗಳ ಪ್ರತೀರೋಧಕತೆ ಹೊಂದಿರುವಂತಹದು. ಈಗಾಗಲೇ ದೇಶಾದ್ಯಂತ 100ಕ್ಕೂ ಹೆಚ್ಚು ಕಡೆಗಳಲ್ಲಿ 12ಕ್ಕೂ ಹೆಚ್ಚು ಇಂತಹ ಬೆಳೆಗಳ ಪ್ರಯೋಗ ನಡೆಸಲು ಸರ್ಕಾರ ಅನುಮೋದಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಳೆ ರೈತರ ಪ್ರತಿಭಟನೆ

ಕಾನೂನುಬಾಹಿರವಾಗಿ ಬೆಳೆಯುತ್ತಿದ್ದ ಬಿಟಿ ಹತ್ತಿಯನ್ನು 2002 ರಲ್ಲಿ ಭಾರತ ಸರ್ಕಾರವು ಕಾನೂನುಬದ್ಧಗೊಳಿಸಿದ ನಂತರ, ಸರ್ಕಾರದ ನೀತಿ ನಿರೂಪಕರು ಇನ್ನೂ ಮುಂದುವರೆದು ಎರಡು ಜನಪ್ರಿಯ ಆಹಾರ ಬೆಳೆಗಳಾದ ಬಿಟಿ ಬದನೆಕಾಯಿ (2009 ರಲ್ಲಿ) ಮತ್ತು2017 ರಲ್ಲಿ ಕುಲಾಂತರಿ ಸಾಸಿವೆ. ಅಂತಿಮವಾಗಿ (2022ರಲ್ಲಿ) ಕಳೆನಾಶಕ ಸಹಿಷ್ಣು (ಎಚ್‌ಟಿ) ಗಳ ಕುಲಾಂತರಿ ಬೀಜಗಳನ್ನು ಅನುಮೋದಿಸಲು ಮುಂದಾಗಿದ್ದಾರೆ. ಸರ್ಕಾರಗಳ ಈ ಕ್ರಮವನ್ನು ಖಂಡಿಸಿ, ಸುರಕ್ಷಿತ, ಸುಸ್ಥಿರ ಮತ್ತು ಆರೋಗ್ಯಕರ ಭಾರತಕ್ಕಾಗಿ ಕುಲಾಂತರಿ ನಿರ್ಮೂಲನೆಗಾಗಿ ರೈತಸಂಘ ಸೆ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.ಜಿಲ್ಲಾ ಪ್ರಧಾನ ಕಾರ್ಯದಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ವಿದ್ಯುತ್ ಇಲಾಖೆ ರೈತರ ಕೃಷಿ ಬೊರೆವಲ್ ಗಳಿಗೆ ಅದಾರ್ ಜೊಡಣೆ ತಕ್ಷಣ ಸರ್ಕಾರ ಕೈಬಿಡಬೇಕು. ಮಳೆಯಾಶ್ರಿತ ಭೂಮಿಯಲ್ಲಿ ಈ ಬಾರಿ ಬಿತ್ತನೆ ಮಾಡಿದ ಬೆಳೆಗಳು ಮಳೆಯ ಪ್ರಮಾಣ ಕಡಿಮೆಯಾಗಿಮೊಳಕೆಯಲ್ಲಿಯೇ ಓಣಗುವ ಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರ ಬರ ಘೋಷಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಮೇಶ್,ಮುನೇಗೌಡ,ಹುಸೇನ್ ಸಾಬ್, ಮತ್ತಿತರರು ಇದ್ದರು.