ಕಿತ್ತೂರಿನ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಮೋಡಿ ದಾಖಲೆಗಳು

| Published : Dec 19 2024, 12:34 AM IST

ಕಿತ್ತೂರಿನ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಮೋಡಿ ದಾಖಲೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕದ ಹಲವಾರು ಮೋಡಿ ದಾಖಲೆಗಳನ್ನು ಕರ್ನಾಟಕ ಜಮಾವ ಎಂಬ ವಿಭಾಗದಲ್ಲಿ ಪುಣೆಯ ಪತ್ರಗಾರದಲ್ಲಿ ಸಂಗ್ರಹಿಸಲಾಗಿದೆ ಎಂದು ಖ್ಯಾತ ಇತಿಹಾಸ ತಜ್ಞ ಡಾ. ಎಂ.ವೈ. ಸಾವಂತ ಹೇಳಿದರು.

ಧಾರವಾಡ: ಕಿತ್ತೂರು ದೇಸಾಯಿಯವರ ಮತ್ತು ರಾಣಿ ಚೆನ್ನಮ್ಮನ ಕಾಲದ ಮರಾಠಿ ಮೋಡಿ ದಾಖಲೆಗಳು ಪುಣೆಯ ಪತ್ರಾಗಾರದಲ್ಲಿ ನೋಡಲು ಸಿಗುತ್ತವೆ. ಸುಮಾರು 75 ರುಮಾಲುಗಳಲ್ಲಿ ಮೋಡಿ ಕಾಗದಪತ್ರಗಳಿವೆ. ಅವುಗಳ ಅಧ್ಯಯನ ಆಗಬೇಕಾಗಿದೆ ಎಂದು ಖ್ಯಾತ ಇತಿಹಾಸ ತಜ್ಞ ಡಾ. ಎಂ.ವೈ. ಸಾವಂತ ಹೇಳಿದರು.

ಇಲ್ಲಿಯ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟ ಸಾಧನಕೇರಿಯ ಚೈತ್ರದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ `ಮೋಡಿ ದಾಖಲೆಗಳಲ್ಲಿ ರಾಣಿಚೆನ್ನಮ್ಮನ ಕಿತ್ತೂರಿನ ಇತಿಹಾಸ'''' ವಿಷಯದ ಕುರಿತು ಮುಖ್ಯ

ಅತಿಥಿಯಾಗಿ ಮಾತನಾಡಿದರು.

ಕಿತ್ತೂರು ಸಂಸ್ಥಾನ ಉತ್ತರ ಕರ್ನಾಟಕದಲ್ಲಿ ಬಹುಪ್ರಸಿದ್ಧ. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ತಲೆಯೆತ್ತಿದ ಅನೇಕ ಸಂಸ್ಥಾನಗಳಲ್ಲಿ ಕಿತ್ತೂರು ಸಂಸ್ಥಾನವೂ ಒಂದು. ಪುಣೆಯ ಪೇಶ್ವೆಗಳಿಗಿಂತ ಮುಂಚೆ

ಕಿತ್ತೂರು ಪ್ರದೇಶವನ್ನು ಸವಣೂರು ನವಾಬನು ಆಳುತ್ತಿದ್ದನು. ನಂತರ ಈ ಭಾಗವನ್ನು ಪೇಶ್ವೆಯವರಿಗೆ ಒಪ್ಪಿಸಿದನು ಎಂದರು.

ಉತ್ತರ ಕರ್ನಾಟಕದ ಹಲವಾರು ಮೋಡಿ ದಾಖಲೆಗಳನ್ನು ಕರ್ನಾಟಕ ಜಮಾವ ಎಂಬ ವಿಭಾಗದಲ್ಲಿ ಪುಣೆಯ ಪತ್ರಗಾರದಲ್ಲಿ ಸಂಗ್ರಹಿಸಲಾಗಿದೆ. ಸಂಬಂಧಪಟ್ಟ ಇಲಾಖೆಯವರು ರುಮಾಲುಗಳಲ್ಲಿರುವ ದಾಖಲೆಗಳನ್ನು ಝೆರಾಕ್ಸ್ ಮಾಡಿ ಧಾರವಾಡದ ಪತ್ರಾಗಾರದಲ್ಲಿ ಸಂಶೋಧನೆಗಾಗಿ ಇಡಬಹುದಾಗಿದೆ ಎಂದು ಸಲಹೆ ನೀಡಿದರು. ಈ ವೇಳೆ ಕೆಲವು ಮೋಡಿ ದಾಖಲೆಗಳನ್ನು ಪ್ರದರ್ಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಗಿರಿಧರ ಕಿನ್ನಾಳ, ಇಂದಿನ ದಿನಗಳಲ್ಲಿ ಮೋಡಿ ಕಲಿಯುವವರ ಸಂಖ್ಯೆ ಹೆಚ್ಚಾಗಿದೆ. ಕಾರಣ ಸ್ಥಳೀಯ ಇತಿಹಾಸ ಸಂಶೋಧನಾ ಮಂಡಳಿಯಲ್ಲಿ ಮೋಡಿ ಲಿಪಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಇದರ ಪ್ರಯೋಜನ ಪಡೆಯಲು ತಿಳಿಸಿದರು.

ನಂತರ ನಡೆದ ಲಘುಸಂಗೀತದಲ್ಲಿ ಹಿರಿಯ ಕಲಾವಿದ ನಟರಾಜ ಮಹಾಜನ ಮೂಗಿನಿಂದ ಶಹನಾಯಿ ವಾದನದಲ್ಲಿ ``ಸನಾದಿ ಅಪ್ಪಣ್ಣ''''''''ದಲ್ಲಿಯ ``ಕರೆದರೂ ಕೇಳದೇ'''''''' ಮತ್ತು ``ವಾರ ಬಂತಮ್ಮಾ'''''''' ಹಾಡುಗಳನ್ನು

ಸುಂದರವಾಗಿ ಪ್ರಸ್ತುತ ಪಡಿಸಿದರು. ಹಾರ‍್ಮೋನಿಯಂದಲ್ಲಿ ರವೀಂದ್ರ ಪಾಟೀಲ ಹಾಗೂ ತಬಲಾದಲ್ಲಿ ಸುರೇಶ ನಿಡಗುಂದಿ ಸಾಥ್ ನೀಡಿದರು.

ಇತ್ತೀಚೆಗೆ ನಿಧನರಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಖ್ಯಾತ ತಬಲಾ

ಮಾಂತ್ರಿಕ, ಪದ್ಮವಿಭೂಷಣ ಉಸ್ತಾದ ಝಾಕೀರ್ ಹುಸೇನ ಅವರ ನಿಧನಕ್ಕಾಗಿ ಎರಡು ನಿಮಿಷಗಳ ಮೌನ

ಆಚರಿಸಲಾಯಿತು. ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಶ್ರದ್ಧಾಂಜಲಿ ಗೊತ್ತುವಳಿ

ಮಂಡಿಸಿದರು. ಅನಿಲ ಕಾಖಂಡಿಕಿ, ಡಾ. ಬಾಳಣ್ಣ ಶೀಗಿಹಳ್ಳಿ, ರಮೇಶ ಇಟ್ನಾಳ, ಡಾ. ಅರವಿಂದ

ಯಾಳಗಿ, ಎನ್.ಜಿ. ರಸಾಳಕರ, ಮಹಾಬಲೇಶ್ವರ ಸಿಂದಗಿ, ಹರ್ಷ ಡಂಬಳ, ಎಸ್.ಬಿ. ದ್ವಾರಪಾಲಕ,

ಆನಂದ ಕುಲಕರ್ಣಿ, ಅನಂತ ಥಿಟೆ, ಡಾ. ಅರುಣ ಅಂಗಡಿ, ಪ್ರೊ. ಸಿ.ಆರ್. ಜೋಶಿ, ಶ್ರೀಕಾಂತ

ಬೀಳಗಿ, ಗುರುರಾಜ ಕುಲಕರ್ಣಿ, ಆರ್.ಎಂ. ಹೊಸಮನಿ, ಎಸ್.ಎಸ್. ಬಂಗಾರಿಮಠ, ಕೆ.ಸಿ.

ಪುರಾಣಿಕಮಠ, ಎನ್.ಪಿ. ರಾಯರ, ಎಂ.ವಿ. ಹೊಸಮನಿ, ಆರ್.ಎಂ. ದೊಡ್ಡಮನಿ, ಜಯಲಕ್ಷ್ಮೀ

ಬೀಳಗಿ, ಸೀಮಾ ಪರಾಂಜಪೆ ಇದ್ದರು.