ಇಂದು ಗಜೇಂದ್ರಗಡದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಸಂಭ್ರಮಈ ಹಿಂದಿನ ವರ್ಷಗಳಲ್ಲಿ ರೈತ ಸಮೂಹಕ್ಕೆ ಅತಿಯಾದ ಮಳೆ, ಕೀಟಬಾಧೆ ಅತೀವೃಷ್ಟಿ, ಬರಗಾಲ ಹೀಗೆ ಸಮಸ್ಯೆಗಳಿಂದ ನಲುಗಿದ್ದ ತಾಲೂಕಿನ ರೈತ ಸಮೂಹಕ್ಕೆ ಪ್ರಸಕ್ತ ಕಾಲಕ್ಕೆ ಮಳೆ ಸುರಿದು ರೈತರ ಕೃಷಿ ಚಟುವಟಿಕೆಗಳಿಗೆ ಸಾಥ್ ನೀಡದಿರುವ ಕಾರಣ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಕೆಲ ಭಾಗಗಳಲ್ಲಿ ಬಿತ್ತನೆಯಾಗಿದ್ದು, ಇದೆಲ್ಲದರ ಮಧ್ಯೆಯೇ ರೈತರ ಆರಾಧ್ಯವೆನಿಸಿದ ಮಣ್ಣೆತ್ತಿನ ಅಮಾವಾಸ್ಯೆ ಜೂ. 25ರಂದು ಆಚರಿಸಲು ಮುಂದಾಗಿದ್ದಾರೆ.