ಮೂರು ತಿಂಗಳೊಳಗೆ ಬಿ ಖಾತಾ ಪಡೆಯಿರಿ: ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ

| Published : Feb 21 2025, 11:48 PM IST

ಸಾರಾಂಶ

ಕುಕನೂರು ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಪ್ಲಾಟ್‌ ಹಾಗೂ ಎನ್‌ಎ ಪ್ಲಾಟ್‌ ಸೇರಿ ಒಟ್ಟು ೬೧೧೫ ಪ್ಲಾಟ್‌ ಮಾಲೀಕರು ಕಡ್ಡಾಯವಾಗಿ ಮೂರು ತಿಂಗಳ ಒಳಗಾಗಿ ಬಿ-ಖಾತಾ ಪಡೆದುಕೊಳ್ಳಬೇಕು.

ಕುಕನೂರು:

ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಪ್ಲಾಟ್‌ ಹಾಗೂ ಎನ್‌ಎ ಪ್ಲಾಟ್‌ ಸೇರಿ ಒಟ್ಟು ೬೧೧೫ ಪ್ಲಾಟ್‌ ಮಾಲೀಕರು ಕಡ್ಡಾಯವಾಗಿ ಮೂರು ತಿಂಗಳ ಒಳಗಾಗಿ ಬಿ-ಖಾತಾ ಪಡೆದುಕೊಳ್ಳಬೇಕೆಂದು ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮದಂತೆ ಪಟ್ಟಣದಲ್ಲಿ ಅಧಿಕೃತ ೬೩೬೨ ಆಸ್ತಿ, ಅನಧಿಕೃತ ೩೮೮೩, ಒಟ್ಟು ೧೦೨೪೫ ಆಸ್ತಿಗಳು ಇವೆ. 2025ರ ಫೆ. ೧೭ರ ವರೆಗೆ ಇ-ಖಾತಾ ನೀಡಿರುವ ಆಸ್ತಿಗಳಂತೆ ಅಧಿಕೃತ ೪೧೧೫, ಅನಧಿಕೃತ ೧೫, ಒಟ್ಟು ೪೧೩೦ ಇವೆ. ೨೦೨೫ರಂತೆ ಇ-ಖಾತಾ ನೀಡಲು ಬಾಕಿಯಿರುವ ಅಧಿಕೃತ ಆಸ್ತಿಗಳು ೨೨೪೭, ಇ-ಖಾತಾ ನೀಡಲು ಬಾಕಿಯಿರುವ ಅನಧಿಕೃತ ಆಸ್ತಿಗಳು ೩೮೬೮, ಒಟ್ಟು ಇ-ಖಾತಾ ನೀಡಲು ಬಾಕಿಯಿರುವ ಒಟ್ಟು ಆಸ್ತಿಗಳು ೬೧೧೫ ಇವೆ. ಬಿ ಖಾತಾಗೆ ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ೧೦-೦೯-೨೦೨೪ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರ/ದಾನಪತ್ರ/ವಿಭಾಗ ಪತ್ರ/ ಹಕ್ಕು ಖುಲಾಸೆ ಪತ್ರ, ಪ್ರಸಕ್ತ ಸಾಲಿನ ವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರೆಗೆ ಪಾವತಿ ರಸೀದಿ, ಮಾಲೀಕರ ಪೋಟೋ ಮತ್ತು ಸ್ವತ್ತಿನ ಪೋಟೋ, ಮಾಲೀಕರ ಗುರುತಿನ ದಾಖಲಾತಿ ಪ್ರತಿ ಸಲ್ಲಿಸಬೇಕೆಂದು ಹೇಳಿದರು. ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನ್‌ಸಾಬ್‌ ಗುಡಹಿಂದಲ್ ಇದ್ದರು.

21ಕೆಕೆಆರ್1