ಸಾರಾಂಶ
ಸವಣೂರು: ತಾಲೂಕು ಸಾರ್ವಜನಿಕ ಆಸ್ಪತ್ರೆ 1885ರಲ್ಲಿ ಪ್ರಾರಂಭಗೊಂಡು 140 ವರ್ಷ ಗತಿಸಿ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಿ ಕಟ್ಟಡ ಹಳೆಯದಾದರೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದು ಲಕ್ಷ್ಯ ಯೋಜನೆಯ ಕೇಂದ್ರ ಅಧಿಕಾರಿ ಡಾ. ಹರ್ಷಾ ರಜಪೂತ ಅಭಿಪ್ರಾಯಪಟ್ಟರು. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ಕೇಂದ್ರ ಸರ್ಕಾರದ ಲಕ್ಷ್ಯ ಯೋಜನೆಯ ಪ್ರಗತಿ ಪರಿಶೀಲನೆಗೆ ಆಗಮಿಸಿದ ತಂಡವು ಆಸ್ಪತ್ರೆಯ ಪ್ರಸೂತಿ, ಹೆರಿಗೆ, ಶಸ್ತ್ರ ಚಿಕಿತ್ಸಾ ವಿಭಾಗದ ವ್ಯವಸ್ಥೆ ಪರಿಶೀಲಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಲಕ್ಷ್ಯ ಯೋಜನೆಯನ್ನು ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಸಮರ್ಪಕವಾಗಿ ಬಳಕೆಯಾಗಿದೆ. ನವಾಬರ ಆಡಳಿತ ಕಾಲದಲ್ಲಿಯೆ ಪ್ರಾರಂಭಗೊಂಡ ಆಸ್ಪತ್ರೆ ಇಂದಿಗೂ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡವನ್ನು ಶುಚಿಯಾಗಿಟ್ಟುಕೊಂಡು ನಿತ್ಯ ಬರುವ ರೋಗಿಗಳಿಗೆ ತಪಾಸಣೆ ಜತೆಗೆ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಲಕ್ಷ್ಯ ಯೋಜನೆಯ ಅಧಿಕಾರಿ ಡಾ. ಶಾಲಿನಿ ತೋಟಾ ಮಾತನಾಡಿ, ಸರ್ಕಾರಿ ಆಸ್ಪತ್ರೆ ಎಂದರೆ ಸೌಲಭ್ಯಗಳ ಕೊರತೆ, ಸಮರ್ಪಕವಾಗಿ ದೊರೆಯದ ಚಿಕಿತ್ಸೆ, ಔಷಧಿಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳ ತಾಣ ಎಂಬುದು ಸಾರ್ವಜನಿಕರಲ್ಲಿದೆ. ಅದನ್ನು ಅಳಿಸಿ ರಾಜ್ಯದಲ್ಲಿನ ಆಸ್ಪತ್ರೆಗಳಲ್ಲಿ ಟಾಪ್ 10ರಲ್ಲಿ ಒಂದಾಗಿ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಶಂಕರಗೌಡ ಹಿರೇಗೌಡ್ರ ಮಾತನಾಡಿದರು. ಶ್ರೀಧರ ಬೆಂಗೇರಿ, ಡಾ. ವೀರೇಶ್, ಡಾ. ನಟರಾಜ ಎಸ್.ಬಿ., ಡಾ. ಶಮಂತ ಶೆಟ್ಟಿ, ಡಾ. ನೂರುದ್ದೀನ್ ಬೆನ್ನೂರ, ಕಚೇರಿ ಅಧೀಕ್ಷಕರಾದ ಸುಷ್ಮಾ ನೀರಲಗಿ, ಭವ್ಯಾ ಮಾಗಳದ, ಫಾರ್ಮಸಿ ಅಧಿಕಾರಿಗಳಾದ ಶಾಂತವೀರೇಶ ಯಳಮಲಿ, ಜಗದೀಶ ಹಾವಣಗಿ, ರಾಮಕೃಷ್ಣ ಘಾಟಗೆ, ಶುಶ್ರೂಷಕಿ ಅಧಿಕಾರಿಗಳಾದ ಅನಿತಾ ಬೆಳವಲಕೊಪ್ಪ, ಗುಣಸುಂದರಿ, ಆರ್.ಜೆ. ಗೂಟ್ಟಮುಕ್ಕಲ, ಸರೋಜಾ ಲಮಾಣಿ, ಆಶಾಲತಾ ನರೇಂದ್ರ, ಅರುಣಾ ಪಾಟೀಲ, ಪ್ರಕಾಶ್ ಲಿಗಾಡಿ, ರೇಡಿಯಾಲಾಜಿಸ್ಟ್ ಪರಶುರಾಮ ಗುಂಜಳ, ಆಪ್ತ ಸಮಾಲೋಚಕರಾದ ಜಿಲಾನಿ ನವಲಗುಂದ, ರಕ್ತ ಶೇಖರಣಾ ಘಟಕದ ಮಹಾಂತೇಶ ಹೊಳೆಮ್ಮನವರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.