ಸಾರಾಂಶ
ಸೇವಾಲಾಲ್ ಜಯಂತಿ
ಕನ್ನಡ ಪ್ರಭ ವಾರ್ತೆ ಹೊನ್ನಾಳಿ/ ನ್ಯಾಮತಿಬಂಜಾರ ಸಮುದಾಯದ ಎಲ್ಲಾ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಸಿದ್ದರಾಮಯ್ಯ ಸರ್ಕಾರ ಮಾಡಿದ್ದು, ಇದಕ್ಕಾಗಿ 60 ಕೋಟಿ ರು. ವೆಚ್ಚಮಾಡಲಾಗಿದೆ. ಬಂಜಾರ ಸಮುದಾಯದವರು ಬೇರೆ ಬೇರೆ ಊರುಗಳಿಗೆ ವಲಸೆ ಹೋಗುವ ಜನಾಂಗವಾಗಿರುವ ಕಾರಣ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸೂರಗೊಂಡನಕೊಪ್ಪದ ಸಂತಸೇವಾಲಾಲ್ ಪುಣ್ಯ ಕ್ಷೇತ್ರದಲ್ಲಿ 50 ಕೋಟಿ ರು. ವೆಚ್ಚದಲ್ಲಿ ವಸತಿ ಶಾಲೆ ನಿರ್ಮಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
ನ್ಯಾಮತಿ ತಾಲೂಕಿನ ಬಂಜಾರ ಸಮುದಾಯ ಏಕೈಕ ಪವಿತ್ರ ಕ್ಷೇತ್ರವಾದ ಸಂತ ಸೇವಾಲಾಲ್ ಹಾಗೂ ಮಾರಿಯಮ್ಮ ದೇವಿ ನೆಲೆಸಿರುವ ಸೊರಗೊಂಡನಕೊಪ್ಪದಲ್ಲಿ (ಭಾಯಾಗಡ್) ಶುಕ್ರವಾರ ಸಂತ ಸೇವಾಲಾಲ್ 286ನೇ ಜಯಂತಿ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಸಂತ ಸೇವಾಲಾಲ್ ಸಮುದಾಯ ಇಡೀ ಸಮಾಜಕ್ಕೆ ಮಾದರಿಯಾಗಿ ಪ್ರಮಾಣಿಕವಾಗಿ ಹಾಗೂ ಸ್ವಂತ ಶ್ರಮದಿಂದ ಬದುಕುವ ಸ್ವಾಭಿಮಾನಿ ಜನ ಸಮುದಾಯವಾಗಿದೆ ಎಂದ ಅವರು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕ್ಷೇತ್ರಕ್ಕೆ ಒಂದು ಟ್ರಸ್ಟ್ ಮಾಡುವ ಮೂಲಕ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಬಂಜಾರ ತಾಂಡಗಳಲ್ಲಿ 1500 ಸೇವಾಲಾಲ್ ಭವನ ಮಾಡಲಾಗಿದೆ ಇದರ ಜೊತೆಗೆ 1ನೇ ತರಗತಿಯಿಂದ ಪಿ.ಯು.ಸಿ.ವರೆಗೆ ವಸತಿಯುತ ಶಾಲೆ ಆರಂಭಿಸಲು ಮನವಿ ಮಾಡಿದ್ದು, ಇದನ್ನು 2025-26ನೇ ಬಜೆಟ್ ನಲ್ಲಿ ಅನುನೋದನೆ ಪಡೆದು ಆರಂಭಸಲಾಗುವುದು ಇದಕ್ಕಾಗಿ 40 ಕೋಟಿಗೂ ಅಧಿಕ ಅನುದಾನ ವೆಚ್ಚಮಾಡಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ವಿಧಾನಸಭೆ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಎಂ. ಲಮಾಣಿ ಮಾತನಾಡಿ
ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಡಿ.ಜಿ.ಶಾಂತನಗೌಡ, ಮಹಾರಾಷ್ಟ್ರ ಸಚಿವ ಸಂಜಯ್ ರಾಥೋಡ್ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕೌಶಲ್ಯಾಭಿವೃದ್ದಿ ನಿಗಮದ ಅದ್ಯಕ್ಷೆ ಕಾಂತಾ ನಾಯ್ಕ, ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಮಾಜಿ ಶಾಸಕ ಪಿ.ರಾಜೀವ್, ಕೆ. ಶಿವಮೋರ್ತಿನಾಯ್ಕ, ಬಸವರಾಜ್ ನಾಯ್ಕ, ಜಲಜಾನಾಯ್ಕ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾಪ್ರಶಾಂತ್ .ಜಿ.ಪಂ. ಸಿ.ಇ.ಓ. ಡಾ. ಸುರೇಶ್ ಬಿ. ಹಿಟ್ನಾಳ್, ಎನ್.ರಾಜು, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ. ಅಭಿಷೇಕ್, ಹೀರಾನಾಯ್ಕ, ಅನೇಕರು ಇದ್ದರು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸ್ವಾಗತಿಸಿದರು.