ಸಾರಾಂಶ
ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕು. ಇಲ್ಲದಿದ್ದರೆ ರೈತರಿಗೆ ಹಿನ್ನಡೆ ಉಂಟಾಗುತ್ತದೆ. ಹಾಗಾಗಿ ರೈತರು ಭೂಮಿಯ ಫಲವತ್ತತೆಯ ಅನುಸಾರ ಬೆಳೆ ಬೆಳೆಯಲು ಮುಂದಾಗಬೇಕು. ಯಾವ ಬೆಳೆ ಬೆಳೆದರೆ ಹೆಚ್ಚು ಆದಾಯ ಬರುತ್ತದೆ ಎನ್ನುವುದನ್ನು ಅರಿತು ಬೇಸಾಯಕ್ಕೆ ಮುಂದಾಗಬೇಕು ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ ಮಂಜು ತಿಳಿಸಿದರು. ಇಲಾಖೆ ತಜ್ಞರು ನೀಡುವ ಸಲಹೆಗಳನ್ನು ಅನುಸರಿಸಿ ರೈತರು ತಮ್ಮ ಆದಾಯ ದುಪ್ಪಟ್ಟು ಮಾಡಿಕೊಳ್ಳಬೇಕು. ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ತಾಂತ್ರಿಕತೆಯನ್ನು ಅನುಸರಿಸಿ ಬೇಸಾಯಕ್ಕೆ ಮುಂದಾಗಬೇಕು ಎಂದು ಎ ಮಂಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕು. ಇಲ್ಲದಿದ್ದರೆ ರೈತರಿಗೆ ಹಿನ್ನಡೆ ಉಂಟಾಗುತ್ತದೆ. ಹಾಗಾಗಿ ರೈತರು ಭೂಮಿಯ ಫಲವತ್ತತೆಯ ಅನುಸಾರ ಬೆಳೆ ಬೆಳೆಯಲು ಮುಂದಾಗಬೇಕು. ಯಾವ ಬೆಳೆ ಬೆಳೆದರೆ ಹೆಚ್ಚು ಆದಾಯ ಬರುತ್ತದೆ ಎನ್ನುವುದನ್ನು ಅರಿತು ಬೇಸಾಯಕ್ಕೆ ಮುಂದಾಗಬೇಕು ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ ಮಂಜು ತಿಳಿಸಿದರು. ಜಿಟ್ಟೆನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ರಾಗಿ ಪ್ರಾತ್ಯಕ್ಷಿಕೆ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕೃಷಿ ಇಲಾಖೆಯ ವತಿಯಿಂದ ಸುಮಾರು ೧೪೫ ಮಂದಿ ರೈತರಿಗೆ ಪರಿಕರಗಳ ವಿತರಣೆಗೆ ಕ್ರಮ ಕೈಗೊಂಡಿದ್ದು ಸಾಂಕೇತಿಕವಾಗಿ ೫ ಜನ ರೈತರರಿಗೆ ಪರಿಕರಗಳನ್ನು ವಿತರಿಸಿ ಮಾತನಾಡಿದರು. ರೈತರು ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಇಲಾಖೆ ತಜ್ಞರು ನೀಡುವ ಸಲಹೆಗಳನ್ನು ಅನುಸರಿಸಿ ರೈತರು ತಮ್ಮ ಆದಾಯ ದುಪ್ಪಟ್ಟು ಮಾಡಿಕೊಳ್ಳಬೇಕು. ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ತಾಂತ್ರಿಕತೆಯನ್ನು ಅನುಸರಿಸಿ ಬೇಸಾಯಕ್ಕೆ ಮುಂದಾಗಬೇಕು ಎಂದು ಎ ಮಂಜು ತಿಳಿಸಿದರು.ಅರಕಲಗೂಡು ತಾಲೂಕು ಕೃಷಿ ನಾಯಕರು ನಿರ್ದೇಶಕರಾದ ಕವಿತಾ, ಕಂದಾಯ ಇಲಾಖೆ ದಿನೇಶ್, ಎಸ್.ಡಿ.ಎಮ್ ಸಿ ಸದಸ್ಯ ಆನಂದ, ಗ್ರಾಪಂ ಸದಸ್ಯರು, ಕಾಳೇಹಳ್ಳಿ ಗ್ರಾಮ ಪಂಚಾಯ್ತಿ ಅಬಿವೃದ್ದಿ ಅಧಿಕಾರಿ ಕೇಶವನಾಗ್, ಕೃಷಿ ಇಲಾಖೆಯ ಲೋಕೇಶ್, ಇಲಾಖೆಯ ಸಿಬ್ಬಂದಿ, ಜಿಟ್ಟೆನಹಳ್ಳಿ ಗ್ರಾಮದ ರೈತರು ಹಾಗೂ ಇತರರು ಹಾಜರಿದ್ದರು.