ಸಾರಾಂಶ
ನಾಡಿನಲ್ಲಿ ಬಸವಜಯಂತಿಯನ್ನು ಮೊಟ್ಟ ಮೊದಲು ಆಚರಣೆಗೆ ತಂದು ಆ ಮೂಲಕ ಬಸವತತ್ವದ ನಿಜಾಚರಣೆಯನ್ನು ಸಮಾಜಕ್ಕೆ ತಿಳಿಸಿದವರು ಹರ್ಡೇಕರ ಮಂಜಪ್ಪನವರು. ಅವರು ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧರಾಗಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವಿ ಗುಂಜೇಕರ ಹೇಳಿದರು.
ನರಗುಂದ: ನಾಡಿನಲ್ಲಿ ಬಸವಜಯಂತಿಯನ್ನು ಮೊಟ್ಟ ಮೊದಲು ಆಚರಣೆಗೆ ತಂದು ಆ ಮೂಲಕ ಬಸವತತ್ವದ ನಿಜಾಚರಣೆಯನ್ನು ಸಮಾಜಕ್ಕೆ ತಿಳಿಸಿದವರು ಹರ್ಡೇಕರ ಮಂಜಪ್ಪನವರು. ಅವರು ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧರಾಗಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವಿ ಗುಂಜೇಕರ ಹೇಳಿದರು.
ಅವರು ಮಂಗಳವಾರ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಗ್ರಾಮದ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದ ಗಾಂಧೀ ಹರ್ಡೇಕರ ಮಂಜಪ್ಪನವರ 139ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ದೇಶದಲ್ಲಿಯೇ ಮೊಟ್ಟ ಮೊದಲು ಗುರುಕುಲ ಮಾದರಿ ಶಿಕ್ಷಣವನ್ನು ಪ್ರಾರಂಭಿಸಿ ಸರ್ವರಿಗೂ ಶಿಕ್ಷಣದ ಹಕ್ಕನ್ನು ನೀಡಿದ ಮಹಾನ ಶಿಕ್ಷಣ ಪ್ರೇಮಿಯಾಗಿದ್ದರು. 1917ರಲ್ಲಿ ಕನ್ನಡ ನಾಡಿನಲ್ಲಿ ಭಜನಾ ಸಂಘ ಸ್ಥಾಪಿಸಿ ಅದನ್ನು ಅನೇಕ ಗ್ರಾಮಗಳಿಗೆ ವಿಸ್ತರಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಅವರ ತತ್ವಾದರ್ಶಗಳು ಸಾರ್ವಕಾಲಿಕ ಎಂದರು.
ಸಾನಿಧ್ಯವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಗಾಂಧೀಜಿಯವರ ಬೋಧನೆಗಳಿಂದ ಪ್ರೇರಿತರಾದ ಹರ್ಡೇಕರ ಮಂಜಪ್ಪನವರು, ಸಮಾಜಕ್ಕೆ ಸೇವೆ ಸಲ್ಲಿಸಲು ಬ್ರಹ್ಮಚರ್ಯ ಜೀವನವೇ ಅತ್ಯುತ್ತಮ ಮಾರ್ಗ ಎಂದು ನಿರ್ಧರಿಸಿದರು. ಅಹಿಂಸಾತ್ಮಕ ಪ್ರತಿರೋಧ ಮಾರ್ಗದ ಮಹತ್ವದ ಕುರಿತು ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಯಶಸ್ಸಿಗೆ ತಮ್ಮ ಶಕ್ತಿಯನ್ನು ಕೊಡುಗೆಯಾಗಿ ನೀಡಿದ ಶ್ರೇಷ್ಠ ರಾಷ್ಟ್ರ ಪ್ರೇಮಿ ಎಂದು ಬಣ್ಣಿಸಿದರು. 2ನೇ ಶತಮಾನದ ಪ್ರಸಿದ್ಧ ಸಂತ, ಸಮಾಜ ಸುಧಾರಕ ಮತ್ತು ವಚನಕಾರ ಬಸವಣ್ಣನ ಬೋಧನೆಗಳಿಗೆ ಸೆಳೆಯಲ್ಪಟ್ಟ ಹರ್ಡೇಕರ್ ಮಂಜಪ್ಪನವರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಬಸವ ತತ್ವವನ್ನು ತಮ್ಮ ಭಾಷಣಗಳು ಮತ್ತು ಅವರ ಬರವಣಿಗೆಯ ಮೂಲಕ ಪ್ರಚಾರ ಮಾಡಿದರು. ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಹಲವು ಬಸವನ ತತ್ವಶಾಸ್ತ್ರದ ವಿವರಣೆಗೆ ಮೀಸಲಾಗಿವೆ ಎಂದರು.ಈ ಸಂದರ್ಭದಲ್ಲಿ ಲಕ್ಷ್ಮಣ ಮನೇನಕೊಪ್ಪ, ಯಲ್ಲಪ್ಪ ತೆಗ್ಗಿನಮನಿ, ಈರಪ್ಪ ಐನಾಪುರ, ಮಹಾಂತೇಶ ಹಿರೇಮಠ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.