ಸಿಎಂ ವಿರುದ್ಧ ದ್ವೇಷದ ರಾಜಕಾರಣ: ಹಳುವಾಡಿ ವೆಂಕಟೇಶ್‌

| Published : Aug 19 2024, 12:53 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳ ಮೂಲಕ ಸಿದ್ದರಾಮಯ್ಯ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರ್ಥಿಕವಾಗಿ ಸಮತೋಲನ ಕಾಯ್ದುಕೊಂಡು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅಭಿವೃದ್ಧಿ ಪರ, ಜನಪರ ಆಡಳಿತ ನಡೆಸುತ್ತಿರುವ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸುವುದರ ಮೂಲಕ ವಿಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿವೆ ಎಂದು ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಸಂಘಟನಾ ಉಸ್ತುವಾರಿ ಹಳುವಾಡಿ ವೆಂಕಟೇಶ್‌ ಆರೋಪಿಸಿದರು.

ಹಿಂದುಳಿದ ವರ್ಗದ ನಾಯಕನೊಬ್ಬ ಮುಖ್ಯಮಂತ್ರಿಯಾಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ. ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಬಿಜೆಪಿ-ಜೆಡಿಎಸ್‌ಗೆ ನುಂಗಲಾಗದ ತುತ್ತಾಗಿದೆ. ಅದಕ್ಕಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ನಡೆಸಿರುವುದಾಗಿ ದೂರಿದ್ದಾರೆ.

ಗ್ಯಾರಂಟಿ ಯೋಜನೆಗಳ ಮೂಲಕ ಸಿದ್ದರಾಮಯ್ಯ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರ್ಥಿಕವಾಗಿ ಸಮತೋಲನ ಕಾಯ್ದುಕೊಂಡು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅಭಿವೃದ್ಧಿ ಪರ, ಜನಪರ ಆಡಳಿತ ನಡೆಸುತ್ತಿರುವ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ಕೋರಿ ದೂರುಗಳು ದಾಖಲಾಗಿದ್ದರೂ ಏಕೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಯಾವ ತಪ್ಪನ್ನೂ ಮಾಡಿಲ್ಲ. ವೃಥಾ ಸುಳ್ಳು ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಇದರ ಮೂಲಕ ಸಿದ್ದರಾಮಯ್ಯ ವರ್ಚಸ್ಸನ್ನು ಕುಗ್ಗಿಸಲು, ತೇಜೋವಧೆ ಮಾಡುವುದಕ್ಕೆ ಸಂಚು ನಡೆಸಿವೆ. ಇದರಿಂದ ಸಿದ್ದರಾಮಯ್ಯನವರ ಬಲ ಕುಗ್ಗುವುದೆಂದು ಭಾವಿಸಿದ್ದರೆ ಅದು ವಿಪಕ್ಷಗಳ ಮೂರ್ಖತನ. ಈ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದು, ವಿಪಕ್ಷಗಳ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.ಬಿತ್ತನೆ ಬೀಜ ಉತ್ಪಾದನೆಗಾಗಿ ರೈತರು ಹೆಸರು ನೋಂದಾಯಿಸಿಮದ್ದೂರು:

ತಾಲೂಕಿನ ಆಸಕ್ತಿ ರೈತರು 2024- 25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೆಎಂಆರ್ 301 ರಾಗಿ ಬಿತ್ತನೆ ಬೀಜ ಉತ್ಪಾದನೆಗಾಗಿ ಕೂಡಲೇ ತಮ್ಮ ಹೆಸರನ್ನು ಸಂಪರ್ಕ ಸಂಖ್ಯೆ, ಆರ್ ಟಿಸಿ ಹಾಗೂ ಆಧಾರ್ ಪ್ರತಿಯೊಂದಿಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ.ಆಸಕ್ತ ರೈತರಿಗೆ ಮಾತ್ರ ಅವಕಾಶವಿದ್ದು ಕೆಎಂಆರ್ 301 ರಾಗಿ ಬಿತ್ತನೆ ಬೀಜ ಉತ್ಪಾದಕತೆಯನ್ನು ಪ್ರತಿ ರೈತರು ಕನಿಷ್ಠ ಒಂದು ಎಕರೆಯಲ್ಲಿ ಬಿತ್ತನೆ ಮಾಡುವುದು. ಪ್ರತಿ ಕುಂಟಾಲ್ ಗೆ ರಾಗಿಗೆ ಎಂ ಎಸ್ ಪಿ ಬೆಲೆಗಿಂತ ನೂರರಿಂದ ಇನ್ನೂರು ರು. ಗಳು ಹೆಚ್ಚಿನ ಹಣವನ್ನು ನೀಡಿ ತಮ್ಮಿಂದ ಬಿತ್ತನೆ ಬೀಜವನ್ನು ನೇರವಾಗಿ ಖರೀದಿ ಮಾಡಲಾಗುವುದು.

ರೈತರು ನೋಂದಣಿಗಾಗಿ ಮೊ-9480102213 ಕರೆ ಮಾಡಿ ನೊಂದಾಯಿಸಿ ಆರ್ ಟಿ ಸಿ ಹಾಗೂ ಆಧಾರ್ ಪ್ರತಿಗಳನ್ನು ಕಚೇರಿಗೆ ತಲುಪಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.