ಹಾವೇರಿಯಲ್ಲಿ ಸ್ನೇಹಿತೆಯೊಂದಿಗೆ ಹೋಗಿದ್ದಕ್ಕೆ ಯುವಕನ ಮೇಲೆ ಹಲ್ಲೆಚೇತನ್ ಅರಗೋಳ ಎಂಬಾತ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಆರೋಪದಡಿ ಹುಬ್ಬಳ್ಳಿಯ ಅರುಣ ಬಡ್ನಿ, ದೇವಿಹೊಸೂರಿನ ರಂಜಿತಾ ಹಳೇಮನಿ ಸೇರಿದಂತೆ ಏಳು ಜನರ ಮೇಲೆ ದೂರು ದಾಖಲಾಗಿದೆ.