ಅತಿವೃಷ್ಟಿ, ಸಂಕಷ್ಟದಲ್ಲೇ ವರ್ಷ ಸವೆಸಿದ ಹಾವೇರಿ ಅನ್ನದಾತವರ್ಷಾರಂಭದಲ್ಲಿ ಭೀಕರ ಬರ, ಜೂನ್ ಬಳಿಕ ನಿಲ್ಲದ ಮಳೆ, ನೆರೆಯಿಂದ ಬೆಳೆ ಹಾನಿ, ಕೊಚ್ಚಿ ಹೋದ ರೈತರ ಬದುಕು...ಹೀಗೆ ಜಿಲ್ಲೆಯ ಅನ್ನದಾತನ ಪಾಲಿಗೆ ನೆಮ್ಮದಿಯಿಲ್ಲದ ವರ್ಷದ ಸಾಲಿಗೆ 2024ನೇ ಇಸ್ವಿ ಕೂಡ ಸೇರಿತು. ನ್ಯಾಯಯುತವಾಗಿ ಬರಬೇಕಿದ್ದ ಪರಿಹಾರಕ್ಕೂ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ.