ಗೃಹ ಸಚಿವ ಪರಮೇಶ್ವರ್ ಹುಟ್ಟುಹಬ್ಬ ಆಚರಣೆ

| Published : Aug 09 2024, 12:38 AM IST

ಸಾರಾಂಶ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್ ಹಣ್ಣುಗಳನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಅಭಿಮಾನಿಗಳ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾನು ನಾಗಸಮುದ್ರ, ಎಸ್.ಸಿ. ಎಸ್.ಟಿ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸನ್ನ ಹೊಸೂರು, ಭೀಮಾರ್ಮಿ ಜಿಲ್ಲಾ ಅಧ್ಯಕ್ಷ ದೊರೆ, ಕಾಂಗ್ರೆಸ್ ಮುಖಂಡ ಮಹೇಶ್‌ಕಬ್ಬಾಳು, ತಾಲೂಕು ಒಬಿಸಿ ಘಟಕ ಅಧ್ಯಕ್ಷ ರಾಮು, ಗೋವಿಂದರಾಜು, ಜಿ.ಪರಮೇಶ್ವರ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮತ್ತಿತರಿದ್ದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್ ಹಣ್ಣುಗಳನ್ನು ವಿತರಣೆ ಮಾಡಲಾಯಿತು.

ಕಾಂಗ್ರೆಸ್ ಮುಖಂಡರು ಮಾತನಾಡಿ, ಪರಮೇಶ್ವರ್‌ರವರು ಒಬ್ಬ ಸರಳ ವ್ಯಕ್ತಿ ಅವರ ಜೀವನ ಶೈಲಿ ನಮಗೆಲ್ಲರಿಗೂ ಆದರ್ಶವಾಗಿದ್ದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಹೈಕಮಾಂಡ್ ಮಾಡಿಕೊಡಬೇಕು, ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರವಾಗಿದ್ದು ಎಲ್ಲರ ಸಹಕಾರದಿಂದ ಸಂಘಟನೆ ಗಟ್ಟಿಯಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಅಭಿಮಾನಿಗಳ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾನು ನಾಗಸಮುದ್ರ, ಎಸ್.ಸಿ. ಎಸ್.ಟಿ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸನ್ನ ಹೊಸೂರು, ಭೀಮಾರ್ಮಿ ಜಿಲ್ಲಾ ಅಧ್ಯಕ್ಷ ದೊರೆ, ಕಾಂಗ್ರೆಸ್ ಮುಖಂಡ ಮಹೇಶ್‌ಕಬ್ಬಾಳು, ತಾಲೂಕು ಒಬಿಸಿ ಘಟಕ ಅಧ್ಯಕ್ಷ ರಾಮು, ಗೋವಿಂದರಾಜು, ಜಿ.ಪರಮೇಶ್ವರ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮತ್ತಿತರಿದ್ದರು.