ಸಾರಾಂಶ
ತಾಲೂಕಿನ ಬಂಡೀಹೊಳೆ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನ ಗುಮಾಸ್ತರಾಗಿ ಸೇವೆಗೆ ಸೇರಿದ ಗಂಗಾಧರ ಆನಂತರ ಬ್ಯಾಂಕ್‌ನ ವ್ಯಸ್ಥಾಪಕರಾಗಿ ತಾಲೂಕಿನ ಬಂಡೀಹೊಳೆ, ಸಾರಂಗಿ, ತೆಂಡೇಕೆರೆ, ಹರಿಹರಪುರ, ಆಲೇನಹಳ್ಳಿ, ನೆರೆಯ ಚಿನಕುರುಳಿ ಮುಂತಾದ ಕಡೆ ಸಾರ್ಥಕ ಸೇವೆ ಸಲ್ಲಿಸಿ ಜನಾನುರಾಗಿ ಅಧಿಕಾರಿಯಾಗಿ ರೂಪುಗೊಂಡರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಹಕರು ಮತ್ತು ಬ್ಯಾಂಕ್‌ಗಳ ನಡುವೆ ಕೌಟುಂಬಿಕ ವಾತಾವರಣ ಇದ್ದಾಗ ಮಾತ್ರ ಬ್ಯಾಂಕ್‌ಗಳ ವ್ಯಾವಹಾರಿಕ ಸಂಬಂಧ ವಿಸ್ತಾರಗೊಳ್ಳುತ್ತದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಎಜಿಎಂ ಆನಂದ ಹೆಗಡೆ ಅಭಿಪ್ರಾಯಪಟ್ಟರು.ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕರಾಗಿ ಸುದೀರ್ಘ 37 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತರಾದ ಕೆ.ಬಿ.ಗಂಗಾಧರ್‌ಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನ ಬಂಡೀಹೊಳೆ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನ ಗುಮಾಸ್ತರಾಗಿ ಸೇವೆಗೆ ಸೇರಿದ ಗಂಗಾಧರ ಆನಂತರ ಬ್ಯಾಂಕ್‌ನ ವ್ಯಸ್ಥಾಪಕರಾಗಿ ತಾಲೂಕಿನ ಬಂಡೀಹೊಳೆ, ಸಾರಂಗಿ, ತೆಂಡೇಕೆರೆ, ಹರಿಹರಪುರ, ಆಲೇನಹಳ್ಳಿ, ನೆರೆಯ ಚಿನಕುರುಳಿ ಮುಂತಾದ ಕಡೆ ಸಾರ್ಥಕ ಸೇವೆ ಸಲ್ಲಿಸಿ ಜನಾನುರಾಗಿ ಅಧಿಕಾರಿಯಾಗಿ ರೂಪುಗೊಂಡರು ಎಂದರು.ಗ್ರಾಹಕರ ಜೊತೆ ಸಹೋದರತ್ವ ಸಂಬಂಧ ಬೆಳೆಸಿ ಬ್ಯಾಂಕ್‌ನ ಬಗ್ಗೆ ಜನರ ನಂಬಿಕೆಯನ್ನು ಬೆಳೆಸಿದರು. ಸಾಲ ನೀಡುವ ಮತ್ತು ಅದನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ವ್ಯವಹಾರವನ್ನು ಹೆಚ್ಚಿಸಿದರು ಎಂದರು.
ತನ್ನ ತಾಯಿ ಪಾರ್ವತಮ್ಮರೊಂದಿಗೆ ಪೌರಸನ್ಮಾನ ಸ್ವೀಕರಿಸಿದ ಕೆ.ಬಿ.ಗಂಗಾಧರ್ ಮಾತನಾಡಿ, ನನ್ನ ಎಲ್ಲಾ ಕೆಲಸಕ್ಕೆ ನನ್ನ ತಾಯಿಯೇ ಸ್ಪೂರ್ತಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ದೇವರು ನಿನಗೆ ಸರ್ಕಾರಿ ಕೆಲಸ ನೀಡಿದ್ದಾನೆ. ಇದರಿಂದ ಬ್ಯಾಂಕ್‌ನ ಸೌಲಭ್ಯಗಳನ್ನೊದಗಿಸಲು ಸಾಧ್ಯವಾಯಿತು ಎಂದರು.ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ಪಿ.ಎಲ್.ಡಿ.ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಕಲ್ಪತರು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಮು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್. ರವಿಶಂಕರ್, ಹಿರಿಯ ವಕೀಲ ಬಂಡಿಹೊಳೆ ಗಣೇಶ್, ನಿವೃತ್ತ ಪಿಡಿಒ ಮಡುವಿನಕೋಡಿ ಚಂದ್ರಶೇಖರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳಾದ ಚಿಕ್ಕರಂಗಯ್ಯ, ಭಾರತೀಯ ಮಜ್ದೂರ್ ಸಂಘದ ತಿಪಟೂರು ಶೇಖರ್, ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಅಮಿತ್, ಸಹಾಯಕ ವ್ಯವಸ್ಥಾಪಕ ರಾಕೇಶ್ ಆರಾಧ್ಯ, ಕೆ.ಬಿ.ಗಂಗಾಧರ್ ಅವರ ತಾಯಿ ಪಾರ್ವತಮ್ಮ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಹಾಗೂ ಗಂಗಾಧರ್ ಮಿತ್ರ ಬಳಗದ ಸದಸ್ಯರು ಭಾಗವಹಿಸಿದ್ದರು.