ಸಾರಾಂಶ
ಮಯೂರಿ ನಾಟ್ಯಕಲಾ ಕೇಂದ್ರ ಸಾರಥ್ಯದಲ್ಲಿ ಹೇಮಂತಲಾಸ್ಯ ನೃತ್ಯೋತ್ಸವಕನ್ನಡಪ್ರಭ ವಾರ್ತೆ ಕೊಪ್ಪ
ಭರತನಾಟ್ಯದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಭಾರತೀಯ ಸಂಸ್ಕೃತಿ ಅಡಗಿದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸ್ವಾಗತಾರ್ಹ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ತುಮ್ಕಾನೆ ಸುಧಾಕರ್ ಎಸ್.ಶೆಟ್ಟಿ ಹೇಳಿದರು.ಶ್ರೀ ಸಾಯಿಶಿವ ಕಲಾಲಯ ಎಜುಕೇಶನ್ ಆರ್ಗನೈಸೇಶನ್ (ರಿ.) ಕೊಪ್ಪದ ಮಯೂರಿ ನಾಟ್ಯಕಲಾ ಕೇಂದ್ರ ಆಯೋಜಿಸಿದ್ದ ಹೇಮಂತಲಾಸ್ಯ ಎರಡನೇ ದಿನದ ನೃತ್ಯೋತ್ಸವದಲ್ಲಿ ಮಾತನಾಡಿದ ಅವರು, ಭರತನಾಟ್ಯ ಕಲಾವಿದರು ಕಲಾ ಪ್ರದರ್ಶನಕ್ಕೆ ಬರುವಾಗ ನಾಟ್ಯದೇವ ನಟರಾಜ, ಕಾಲ್ತೊಡುವ ಕಾಲ್ಗೆಜ್ಜೆ, ಪ್ರದರ್ಶನ ನೀಡುವ ವೇದಿಕೆ, ವಿದ್ಯೆ ಕಲಿಸಿದ ಗುರು ಗಳಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುವ ಮೂಲಕ ತಮ್ಮ ಕಲಾ ಪ್ರದರ್ಶನ ಆರಾಧಿಸುತ್ತಾರೆ. ಭರತನಾಟ್ಯ ಕಲಾವಿದನ ಮುಖಭಾವ, ಹಸ್ತಮುದ್ರಿಕಾ, ಕಣ್ಣು ಮತ್ತು ದೇಹದ ಚಲನವಲನ, ಹಲವಾರು ಭಾವನೆಗಳನ್ನು ಏಕಕಾಲದಲ್ಲಿ ಏಕವ್ಯಕ್ತಿಯ ಮುಖೇನ ತೋರ್ಪಡಿಸುವಂತಹ ವಿಶಿಷ್ಟ ಕಲೆ ಎಂದರು.
ಕಲೆಗಳನ್ನು ಆಧರಿಸಿ ಪ್ರೋತ್ಸಾಹಿಸುತ್ತಿರುವ ಮಯೂರಿ ನಾಟ್ಯಕಲಾ ಕೇಂದ್ರದಂತಹ ಕಲಾಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಬೇಕು ಎಂದು ಹಾರೈಸಿದರು.ಪೋಷಕರು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಂಸ್ಕೃತಿ ಧಾರೆಯೆರೆಯಬೇಕು ಎಂದರು.
ಮಯೂರಿ ನಾಟ್ಯಕಲಾ ಸಂಘದ ಮುಖ್ಯಸ್ಥೆ ಮಮತಾ ಮಯೂರಿ ಮಾತನಾಡಿ, ಹಲವಾರು ವರ್ಷಗಳಿಂದ ಮಕ್ಕಳಿಗೆ ನಾಟ್ಯಕಲೆ ಹೇಳಿಕೊಡುತ್ತಿದ್ದು ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಗೆ ಪೂರಕವಾದ ಗುರುಕುಲ ಸ್ಥಾಪಿಸ ಬೇಕೆನ್ನುವುದು ಸಂಸ್ಥೆಯ ಹೆಬ್ಬಯಕೆಯಾಗಿದೆ ಎಂದರು.ಎಚ್.ಜಿ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ರೇಖಾ ಉದಯ್ ಶಂಕರ್, ರಾಧಿಕ ಸಹದೇವ್, ಯಡಗೆರೆ ಸುಬ್ರಮಣ್ಯ, ಸ್ವಾಗತ ಸಮಿತಿ ಎಂ.ಆರ್.ರಮೇಶ್, ನಟರಾಜ್ ಗೋಗಟೆ ಮುಂತಾದವರು ಮಾತನಾಡಿದರು. ಪ್ರಬೋಧಿನಿ ಗುರುಕುಲದ ಸಂಚಾಲಕರಾದ ಕೃಷ್ಣ ಶಾಸ್ತ್ರೀ ಮತ್ತು ಗುರೂಜಿ ಉದಯ ಕುಮಾರ್‌ರನ್ನು ಸನ್ಮಾನಿಸಿ ಅಬಿನಂದಿಸಲಾಯಿತು.
ಫೋಟೋ ಕ್ಯಾಪ್ಶನ್:ಶ್ರೀ ಸಾಯಿಶಿವ ಕಲಾಲಯ ಎಜುಕೇಶನ್ ಆರ್ಗನೈಸೇಶನ್ (ರಿ.) ಮಯೂರಿ ನಾಟ್ಯಕಲಾ ಕೇಂದ್ರ ಕೊಪ್ಪ ಇವರ ಆಯೋಜನೆಯಲ್ಲಿ ಹೇಮಂತಲಾಸ್ಯ ಕಾರ್ಯಕ್ರಮ ನಡೆಯಿತು.