ಸಾರಾಂಶ
ಪಿಡಿಎ ಇಂಜಿನಿಯರಿಂಗ್ ಕಾಲೇಜಲ್ಲಿ ಕೆಎಸ್‌ಸಿಎಸ್‌ಟಿ ಬೌದ್ಧಿಕ ಆಸ್ತಿ ಹಕ್ಕು ಸೆಲ್ ಆರಂಭಕನ್ನಡಪ್ರಭ ವಾರ್ತೆ ಕಲಬುರಗಿ
ಬೌದ್ಧಿಕ ಆಸ್ತಿಯ ಹಕ್ಕು ಇಂದಿನ 21ನೇ ಶತಮಾನದಲ್ಲಿ ನಮ್ಮ ಪಿತ್ರಾರ್ಜಿತ ಆಸ್ತಿಗಿಂತ ಬಹು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲಜಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಸ್ಥಾಪಿಸಲಾಗಿರುವ ಬೌದ್ಧಿಕ ಆಸ್ತಿ ಹಕ್ಕು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಬೌದ್ಧಿಕ ಆಸ್ತಿಗಳಾದ ಹೊಸ ಅನ್ವೇಷಣೆಗಳು, ಹೊಸ ಸಂಗೀತ ರಾಗಗಳು, ಹೊಸ ಕೃತಿಗಳು, ಮತ್ತೊಬ್ಬರು ಕದಿಯಲಾರದೆ ಇರಬೇಕೆಂದರೆ ನಾವು ಈ ಸಂಶೋಧನೆಗಳನ್ನು ಪೇಟೆಂಟ್‌ಗಳಾಗಿ ರಿಜಿಸ್ಟರ್ ಮಾಡಬೇಕು, ಅಂದಾಗ ಮಾತ್ರ ನಮ್ಮ ಸಂಶೋಧನೆಗೆ ನಮ್ಮ ನಾವಿನ್ಯತೆಗಳಿಗೆ ನಮ್ಮ ಟ್ರೇಡ್ ಮಾರ್ಕ್ ಗಳಿಗೆ ರಕ್ಷಣೆ ಸಿಕ್ಕು ಹಣವನ್ನು ಗಳಿಸಬಹುದು ಎಂದರು.ಭಾರತದ ಭವಿಷ್ಯದ ಆಧಾರ್ ಸ್ತಂಭಗಳಾದ ನೀವೆಲ್ಲ ಇಂಜಿನಿಯರ್‌ಗಳು ಜನರು ಎದುರಿಸುತ್ತಿರುವಂತಹ ಅನೇಕ ಸಮಸ್ಯೆಗಳಿಗೆ ಸರಳವಾದ ಮತ್ತು ಉಪಯುಕ್ತವಾದಂತಹ ಇಂಜಿನಿಯರಿಂಗ್ ಉಪಾಯಗಳನ್ನು ಕಂಡುಹಿಡಿದು ಕಾಲೇಜಿಗೆ ಮತ್ತು ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರುವಂತ ವಿದ್ಯಾರ್ಥಿಗಳಾಗಬೇಕು. ಭವಿಷ್ಯದ ಜಗತ್ತು ಅತಿಸ್ಪರ್ಧೆಕ್ತವಾದ ಕಾರಣ ಎಲ್ಲರೂ ಪರಿಶ್ರಮದಿಂದ ಓದಿ ತಮ್ಮ ಗುರಿ ಮುಟ್ಟಬೇಕು ಎಂದರು.
ಯಶಸ್ಸಿಗೆ ಯಾವುದು ಸಂಕ್ಷಿಪ್ತ ಮಾರ್ಗಗಳಿಲ್ಲ, ಪರಿಶ್ರಮದಿಂದ ದುಡಿದು ಓದಿ ಇವತ್ತಿನ ಕಾಲದ ಅವಶ್ಯಕತೆಗಳಾದ ಸಂವಹನ ಕೌಶಲ್ಯ, ಭಾಷಾ ಪ್ರೌಢಿಮೆ, ವ್ಯವಹಾರ ಜ್ಞಾನಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.ಕರ್ನಾಟಕ ರಾಜ್ಯ ತಂತ್ರಜ್ಞಾನ ಮತ್ತು ವಿಜ್ಞಾನ ಪರಿಷತ್ತಿನ ಈ ಬೌದ್ಧಿಕ ಆಸ್ತಿಯ ಹಕ್ಕುಗಳ ಘಟಕದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕೆದರಲ್ಲದೆ ತಮ್ಮ ಬೆಂಬಲ ಸದಾ ಇದೆ ಎಂದರು.
ಕೆಎಸ್ ಸಿ ಎಸ್ ಟಿ ಕರ್ನಾಟಕದ ಕಾರ್ಯಕಾರಿ ಕಾರ್ಯದರ್ಶಿ ಡಾ. ಯು.ಟಿ. ವಿಜಯ್ ಅತಿಥಿಗಳಾಗಿ ಮಾತನಾಡುತ್ತಾ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಸುಮಾರು 48 ವರ್ಷಗಳಿಂದ ಅನೇಕ ಜನಹಿತ ಕಾರ್ಯಕ್ರಮಗಳನ್ನು ಕೈಗೊಂಡು ಕ ಸುಮಾರು 1500 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಅಂತಿಮ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಗಳಿಗೆ ರೂಪಾಯಿ 5,000 ಸಹಾಯಧನವನ್ನು ನೀಡುತ್ತಾ ಬಂದಿದೆ.ಮಳೆ ನೀರು ಕೋಯ್ಲು, ಕೃಷಿ ಕ್ಷೇತ್ರ, ನೀರಾವರಿ ಕ್ಷೇತ್ರಗಳಿಗೆ ಅನುಕೂಲ ವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳ ಮತ್ತು ಸಂಶೋಧಕರ ನಾವಿನ್ಯತೆಗಳ ರಕ್ಷಣಾ ಗೋಸ್ಕರ ಅವರ ಸಂಶೋಧನೆಗಳನ್ನು ಬೌದ್ಧಿಕ ಆಸ್ತಿಯ ಹಕ್ಕಿನ ಅನುಗುಣವಾಗಿ ಅದನ್ನು ಹೇಗೆ ರಕ್ಷಿಸಬೇಕು ಅದನ್ನು ಹೇಗೆ ರಿಜಿಸ್ಟರ್ ಮಾಡಬೇಕು ಎನ್ನುವ ವಿವರವಾದ ಮಾಹಿತಿಯನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗಾಗಲೇ ಈಗಾಗ ಕರ್ನಾಟಕದಲ್ಲಿ 74 ಬೌದ್ಧಿಕ ಆಸ್ತಿಯ ಹಕ್ಕಿನ ಸಹಾಯ ಘಟಕಗಳನ್ನು ಸ್ಥಾಪಿಸಲಾಗಿದ್ದು ಈಗ ಪಿಡಿಎ ಕಾಲೇಜಿನಲ್ಲಿ 75ನೇ ಘಟಕವನ್ನು ಪ್ರಾರಂಭ ಮಾಡಲಾಗಿದೆ ಎಂದರು.
ಘಟಕದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು, ಇಲ್ಲಿನ ಸುತ್ತಮುತ್ತಲಿನ ಕಲಬುರ್ಗಿಯ ಜಿಲ್ಲೆಯ ಬೀದರ್ ಜಿಲ್ಲೆಯ ಎಲ್ಲಾ ಸಂಶೋಧಕರು, ವಿಜ್ಞಾನಿಗಳು, ಪ್ರಾಧ್ಯಾಪಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಹೈಕಶಿ ಸಂಸ್ಥೆಯ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ ಮಾತನಾಡಿ ಬೌದ್ಧಿಕ ಆಸ್ತಿಯ ಘಟಕ ಸ್ಥಾಪಿಸಲು ಸಹಾಯ ಮಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ ಇದಕ್ಕೆ ಬೇಕಾದಂತಹ ಎಲ್ಲಾ ಬೆಂಬಲವನ್ನು ಹೈಕಶಿ ಸಂಸ್ಥೆಯು ಕೊಡುತ್ತದೆಂದರು.
ಪ್ರಾಚಾರ್ಯರಾದ ಡಾಕ್ಟರ್ ಶಶಿಕಾಂತ್ ಆರ್ ಮೀಸೆ ಸ್ವಾಗತಿಸಿದರು, ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿಯ ಡಿನ್ ಡಾ. ಸುಜಾತಾ ತೆರದಾಳ್ ವಂದಿಸಿದರು. ಪ್ರೊ. ಶಿಲ್ಪಾ ಮಂಗ್ ಶೆಟ್ಟಿ ನಿರೂಪಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಪಿಡಿ ಇಂಜಿನಿಯರಿಂಗ್ ಕಾಲೇಜುಗಳು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯ್ತು.ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಸಹಾಯಕ ಯೋಜನಾಧಿಕಾರಿ ಪ್ರಿಯಾಂಕಾ ಉಪನ್ಯಾಸ ನೀಡಿದರು. ಹೈಕಿ ಸಂಸ್ಥೆಯ ಕಾರ್ಯದರ್ಶಿ ಡಾ. ಜಗನ್ನಾಥ್ ಬಿಜಾಪುರ, ಡಳಿತ ಮಂಡಳಿಯ ಸದಸ್ಯ ಬಸವರಾಜ್ ಕಂಡೆರಾವ್, ವಿನಯ್ ಪಾಟೀಲ್, ಸೋಮನಾಥ ನಿಗುಡುಗಿ, ಡಾ. ಶರಣಬಸಪ್ಪ ಕಾಮರೆಡ್ಡಿ , ಡಾ. ಅನಿಲ್ ಪಟ್ಟನ್, ಡಾ. ವೀರೇಂದ್ರ ಪಾಟೀಲ್ ಮತ್ತು ಕಾಲೇಜಿನ ಉಪಪ್ರಚಾರರಾದಂತಹ ಡಾ. ಕಲ್ಪನಾ ವನ್ಜರಖೇಡೆ, ಡಾ. ಭಾರತಿ ಹರಸೂರ್ ಮತ್ತು ಕಾಲೇಜಿನ ಬೌದ್ಧಿಕ ಆಸ್ತಿಯ ಘಟಕದ ಸಂಚಾಲಕರದ ಡಾ. ಸೈಯದ್ ಫಾತಿಮಾ, ಡಾ ನಾಗೇಶ್ ಸಾಲಿಮಠ್ ಡಾ .ಬಾಬುರಾವ್ ಶೇರಿಕಾರ್ ಇದ್ದರು.ಪೂಜ್ಯ 1
ಕಲಬುರಗಿಯಲ್ಲಿರುವ ಪಿಡಿಎ ಇಂಜಿನಿಯರಿಂಗ್ ಕಾಲೇಜಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜಲ್ಲಿ 75 ನೇಯ ಕೆಎಸ್‌ಸಿಎಸ್‌ಟಿ ಬೌದ್ಧಿಕ ಆಸ್ತಿ ಹಕ್ಕು ಸೆಲ್ ಸಚಿವರಾದ ಡಾ. ಶರಣಪ್ರಕಾಶಪ ಪಾಟೀಲ್ ಶನಿವಾರ ಉದ್ಘಾಟಿಸಿದರು.ಪೂಜ್ಯ 2ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೌದ್ಧಿಕ ಆಸ್ತಿ ಸೆಲ್ ವಿಷಯವಾಗಿ ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯ್ತು.