ಸಾರಾಂಶ
ಗೋಕಾಕ ಶಿಕ್ಷಣ ಸಂಸ್ಥೆಯ 60ನೇ ವರ್ಷದ ಸವಿನೆನಪಿಗಾಗಿ ವಾಯ್ಸ್ ಆಫ್ ಗೋಕಾಕ 89.6 ಸಮುದಾಯ ಬಾನುಲಿ ಕೇಂದ್ರವನ್ನು ಆಗಸ್ಟ್ 16ರಂದು ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಕಡಕೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಗೋಕಾಕ ಶಿಕ್ಷಣ ಸಂಸ್ಥೆಯ 60ನೇ ವರ್ಷದ ಸವಿನೆನಪಿಗಾಗಿ ಗೋಕಾಕ ನಾಡಿನ ಯುವಕರಿಗೆ, ಮಹಿಳೆಯರು, ರೈತರು, ವಿದ್ಯಾರ್ಥಿಗಳು, ಪ್ರತಿಭೆಗಳಿಗೆ ಅನುಕೂಲವಾಗಿ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಾಯ್ಸ್ ಆಫ್ ಗೋಕಾಕ 89.6 ಸಮುದಾಯ ಬಾನುಲಿ ಕೇಂದ್ರವನ್ನು ಆಗಸ್ಟ್ 16ರಂದು ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಕಡಕೋಳ ಹೇಳಿದರು.ಸಾನ್ನಿಧ್ಯವನ್ನು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ವಹಿಸುವರು. ಸಂಸದ ಜಗದೀಶ ಶೆಟ್ಟರ ಕಾರ್ಯಕ್ರಮ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ಸಂಸದ ಈರಣ್ಣ ಕಡಾಡಿ, ಪ್ರಿಯಾಂಕಾ ಜಾರಕಿಹೊಳಿ, ನಿವೃತ್ತ ಸೇನಾಧಿಕಾರಿ ಡಿ.ಎಂ. ಪೂರ್ವಿಮಠ ಹಾಗೂ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಚೇರ್ಮನ್ ಉದಯ ಆಜರೆ ಉಪಸ್ಥಿತರಿರುವರು ಎಂದು ಹೇಳಿದರು. ವಾಯ್ಸ್ ಆಫ್ ಗೋಕಾಕ 89.6 ಬಾನುಲಿ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಉಡುಪಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ತಾವಂಶಿ, ಅಜಯ ಜಾಧವ, ಬಾನೂಲಿ ಕೇಂದ್ರದ ಮುಖ್ಯಸ್ಥ ಡಾ.ವಿ.ವಿ. ಮೋದಿ, ಪ್ರಧಾನ ಶಿಕ್ಷಕ ಎಸ್.ಕೆ. ಮಠದ ಉಪಸ್ಥಿತರಿದ್ದರು.