ದೇಸಿ ಉತ್ಪನ್ನ ಬಳಕೆಯಿಂದ ದೇಹದ ಆರೋಗ್ಯ ಉತ್ತಮ

| Published : Nov 04 2024, 12:54 AM IST

ಸಾರಾಂಶ

ಶಿವಾನುಭವ ಕಲ್ಯಾಣ ಮಂಟಪ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರದೇಸಿ ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ದೇಹದ ಆರೋಗ್ಯ ಸ್ಥಿತಿ ಉತ್ತಮವಾಗುವುದರ ಜತೆಗೆ ದೇಶದ ಆರ್ಥಿಕ ಪರಿಸ್ಥಿತಿಯೂ ಹೆಚ್ಚಲಿದೆ ಎಂದು ದೇಸಿರಿ ಸಂಸ್ಥೆಯ ಪ್ರವರ್ತಕ ಎಚ್.ಆರ್. ನವೀನ್ ಕುಮಾರ್ ಹೇಳಿದರು.ಪಟ್ಟಣದ ಬಸವೇಶ್ವರ ಬಡಾವಣೆಯ ಶಿವಾನುಭವ ಕಲ್ಯಾಣ ಮಂಟಪದ ಎದುರು ಆರಂಭಿಸಿರುವ ದೇಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಪ್ರಪಂಚದಲ್ಲಿ ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳ ಬಳಕೆಯಿಂದ ಮನುಷ್ಯನ ಆರೋಗ್ಯ ಕೆಡುತ್ತಿರುವುದರನ್ನು ತಪ್ಪಿಸಲು ಸ್ಥಳೀಯವಾಗಿ ಉತ್ಪಾದಿಸುವ ಉತ್ಪನ್ನ ಬಳಸಬೇಕು ಎಂದರು.ಸಂಸ್ಥೆಯ ವತಿಯಿಂದ ಗಾಣದ ಎಣ್ಣೆ ಸೇರಿದಂತೆ ಇತರ ದೇಸಿಯ ದಿನಬಳಕೆಯ ಉತ್ಪನ್ನ ತಯಾರಿಸುತ್ತಿದ್ದು ಆ ಮೂಲಕ ಸ್ಥಳೀಯ ರೈತರಿಗೆ ಬೆಂಬಲ ನೀಡುವುದರ ಜತೆಗೆ ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗುತ್ತಿದ್ದು ರಾಜ್ಯಾದ್ಯಂತ ದೇಸಿರಿ ಉತ್ಪನ್ನಗಳ ಮಾರಾಟ ಯೋಜನೆ ಕೈಗೊಂಡಿದ್ದೇವೆ ಎಂದರು.ದೇಸಿರಿ ವತಿಯಿಂದ ರಾಸಾಯನಿಕ ಊಟದ ತಟ್ಟೆ ಉತ್ಪಾದನೆ ಜತೆಗೆ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ ಹಾಗೂ ಮಹಿಳಾ ಸ್ವ್ವಾವಲಂಬನೆ, ದೇಸಿ ಗೋ ತಳಿಗಳ ರಕ್ಷಣೆ ಮತ್ತು ಅವುಗಳನ್ನು ಎಣ್ಣೆ ತಯಾರಿಕೆಯಲ್ಲಿ ಬಳಸುವುದು, ಇಂಗಾಲ ಮುಕ್ತ ಪರಿಸರ ಉಪಕ್ರಮ, ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಹೊಂದಲು ನೆರವಾಗುವುದು. 500 ಎಕೆರೆ ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತವಾಗಿ ಬದಲಾವಣೆಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು. ಮಳಿಗೆಯನ್ನು ಶಾಂತಮ್ಮ ರಾಮಶೆಟ್ಟಿ ಉದ್ಘಾಟಿಸಿದರು. ದೇಸಿರಿ ಪ್ರವರ್ತಕ ಮಹೇಶ್, ಯೋಗೇಶ್, ಗಾವಡಗೆರೆ ಹೋಬಳಿ ಉಪ ತಹಸೀಲ್ದಾರ್ ಅರುಣ್ ಕುಮಾರ್, ಯೋಗಶಿಕ್ಷಕ ರೇವಣ್ಣ, ಲೋಕೇಶ್, ಸುಬ್ಬುರಾಮನ್, ಅಜಯ್ ಮೊದಲಾದವರು ಇದ್ದರು.