ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಪಂಡಿತನಹಳ್ಳಿ ಸಮೀಪದ ಮಂದರ ಗಿರಿ ಬೆಟ್ಟದಲ್ಲಿರುವ ಗುರು ಮಂದಿರ ದೇವಾಲಯದ 450 ಮೆಟ್ಟಿಲುಗಳನ್ನು 2 ವರ್ಷ 2 ತಿಂಗಳ ಮಗು ಭುವನ್‌ರೆಡ್ಡಿ 23 ನಿಮಿಷ 8 ಸೆಕೆಂಡ್‌ಗಳಲ್ಲಿ ಹತ್ತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2 ವರ್ಷ 2 ತಿಂಗಳ ಮಗು ಆಗಿರುವ ಭುವನ್ ರೆಡ್ಡಿ ವಿ. ಅನುಷಾ ಮತ್ತು ಡಿ. ರೆಡ್ಡಿ ಜಗದೀಶ್ ಎಂಬುವರ ಪುತ್ರ. ಇಂಡಿಯಾ ಬುಕ್ ಅಫ್ ರೆಕಾರ್ಡ್ ಕೀರ್ತಿಗೆ ಪಾತ್ರನಾಗಿರುವ ಈ ಮಗು ಭಾರತೀಯ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಸಹ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿ ಪಡೆಯುವಾಗ ಭುವನ್ ರೆಡ್ಡಿಗೆ 1 ವರ್ಷ 4 ತಿಂಗಳಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಪ್ರಾಯೋಗಿಕವಾಗಿ ಬಹು ಕಲಿಕಾ ಚಟುವಟಿಕೆಗಳೊಂದಿಗೆ ಅದ್ಭುತ ಸಾಧನೆಗಳನ್ನು ಡಿ. ಭುವನ್ ರೆಡ್ಡಿ ಮಾಡಿದ್ದಾನೆ. ಅಸಾಧಾರಣ ಮೆಚ್ಚುಗೆ ಮತ್ತು ಬಹುಮುಖ ಜ್ಞಾನ ಮತ್ತು ಅರಿವಿನ ಕೌಶಲ್ಯಗಳೊಂದಿಗೆ, ಅಪ್ರತಿಮ ಪಾಂಡಿತ್ಯಕ್ಕಾಗಿ ಭಾರತೀಯ ವಿಶ್ವ ದಾಖಲೆಯೊಂದಿಗೆ ಮೆಚ್ಚುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ20 ಕ್ಕೂ ಹೆಚ್ಚು ನಿಮಿಷಗಳ ಕಾಲ ವಿರಾಮವಿಲ್ಲದೆ ನಿರಂತರವಾಗಿ ಬರಿಗಾಲಿನಲ್ಲಿ ನಡೆಯುವ ವಿಷಯದಲ್ಲಿ ವ್ಯಾಪಕ ಜ್ಞಾನ ಅಥವಾ ಕಲಿಕೆಯ ಮಗು, ಮುಂದಿನ ಪೀಳಿಗೆಗೆ ಸ್ಫೂರ್ತಿ, ಪ್ರೇರಣೆ ಮತ್ತು ಪ್ರೋತ್ಸಾಹಿಸಲು ಗೂಗಲ್ ಫಿಟ್ ಆಪ್ ನಿಂದ ಪರಿಶೀಲಿಸಲಾದ 1.5 ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸಿದ ಪರಿಣಾಮ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಬರಿಗಾಲಿನಲ್ಲಿ ನಡೆದ ಮೊದಲ ಭಾರತೀಯ ಮಗು ಎಂಬ ಕೀರ್ತಿಗೆ ಭುವನ್ ರೆಡ್ಡಿ ಪಾತ್ರನಾಗಿದ್ದಾನೆ. ನ್ಯಾಯಾಧೀಶರಾದ ಕೆ. ಮಾಧವ ರೆಡ್ಡಿ, ಡಾ. ಜೆ. ಪಾವನಿ ಮತ್ತು ಡಾ. ಕೆ. ಸ್ವರ್ಣ ಶ್ರೀ ಅವರು ಹೈದರಾಬಾದ್‌ನಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತೀರ್ಪು ನೀಡಿದ್ದಾರೆ.
)
)
;Resize=(128,128))
;Resize=(128,128))
;Resize=(128,128))
;Resize=(128,128))