ಕನಕದಾಸರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ.ಅರುಣಕುಮಾರ ಗಾಳಿ

| Published : Nov 10 2025, 03:00 AM IST

ಕನಕದಾಸರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ.ಅರುಣಕುಮಾರ ಗಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತ ಕನಕದಾಸರ ಕಾವ್ಯ ಭಾಷೆ ಅತ್ಯಂತ ಸರಳವಾಗಿದ್ದು, ಸಾಮಾಜಿಕ ಸಮಾನತೆ ಮತ್ತು ಮಾನವ ಕಳಕಳಿ ಹೊಂದಿರುವುದರಿಂದ ಅವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಡಾ.ಅರುಣಕುಮಾರ ಗಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಕ್ತ ಕನಕದಾಸರ ಕಾವ್ಯ ಭಾಷೆ ಅತ್ಯಂತ ಸರಳವಾಗಿದ್ದು, ಸಾಮಾಜಿಕ ಸಮಾನತೆ ಮತ್ತು ಮಾನವ ಕಳಕಳಿ ಹೊಂದಿರುವುದರಿಂದ ಅವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಡಾ.ಅರುಣಕುಮಾರ ಗಾಳಿ ಹೇಳಿದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾರ್ಥನಾ ವಲಯದ ಆವರಣದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಪ್ರಸಕ್ತ ಕಾಲಘಟ್ಟದಲ್ಲಿ ಜಾತಿ, ಧರ್ಮ, ಮತ-ಪಂಥಗಳ ಸಂಕುಚಿತ ಮನೋಭಾವನೆಗಳಿಂದಾಗಿ ಜಡತ್ವ ತುಂಬಿರುವ ಇಂದಿನ ಸಮಾಜಕ್ಕೆ ಕನಕದಾಸರ ವಿಚಾರಧಾರೆಗಳು ರಾಮಬಾಣವಾಗಬಲ್ಲವು. ಅವರ ಆದರ್ಶ ಪಾಲಿಸುತ್ತ ಅವರು ತೋರಿಸಿದ ಭಕ್ತಿಯ ಮಾರ್ಗದಲ್ಲಿ ನಾವು ನಡೆದು ಧನ್ಯರಾಗೋಣ ಎಂದರು.

ಕಾಲೇಜಿನ ಎನ್.ಎಸ್.ಎಸ್ ಘಟಕದ ಎಲ್ಲಾ ಸ್ವಯಂ ಸೇವಕರು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು. ಡಾ.ಸುಮನ್ ಮುಚಖಂಡಿ ಪ್ರಾರ್ಥಿಸಿದರು. ಪ್ರೊ.ಪರಸಪ್ಪ ತಳವಾರ ಕನಕದಾಸರ ಕೀರ್ತನೆ ಹಾಡಿದರು, ಪ್ರೊ.ಸಂಪತ್ತ ಲಮಾಣಿ ಸ್ವಾಗತಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.