ಇಂದಿನ ಸ್ವಾಭಿಮಾನಿ ಸಮಾವೇಶಕ್ಕೆ ಕೊಡಗಿನಿಂದ 5-8 ಸಾವಿರ ಮಂದಿ: ರಮೇಶ್ಹಾಸನದಲ್ಲಿ ಇಂದು ನಡೆಯುವ ಸ್ವಾಭಿಮಾನಿ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೆ ಪೂರಕವಾಗಿ ಕೊಡಗಿನಿಂದ 50 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಮಟ್ಟ ಮತ್ತು ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣ ಪ್ರದೇಶಗಳಿಂದ ಹೆಚ್ಚಿನ ಬಸ್ ಗಳು ತೆರಳಲಿವೆ.