ಕೌಟುಂಬಿಕ ಹಾಕಿ ಮೊದಲ ದಿನದ ಪಂದ್ಯಾವಳಿ: ವಚನ್ ಹ್ಯಾಟ್ರಿಕ್ ಗೋಲು ಹೆಗ್ಗಳಿಕೆಮೊದಲ ಪಂದ್ಯದಲ್ಲಿ ಕಂಜಿತಂಡ ತಂಡವು ಕುಪ್ಪಂಡ (ನಾಂಗಾಲ) ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಉಜ್ವಲ್ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಬಾರಿಸಿ ಖಾತೆ ತೆರೆದರೆ, ಮತ್ತೋರ್ವ ಅತಿಥಿ ಆಟಗಾರ ವಚನ್ 10ನೇ, 29ನೇ ಮತ್ತು 32ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದರು.