ಕುಶಾಲನಗರ: 13ರಂದು 6ನೇ ವರ್ಷದ ಅದ್ಧೂರಿ ಹನುಮ ಜಯಂತಿಕುಶಾಲನಗರ ರಥಬೀದಿಯಲ್ಲಿರುವ ಆಂಜನೇಯ ದೇವಾಲಯ ಸಮಿತಿಯಿಂದ ಕಳೆದ 38 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಹನುಮ ಜಯಂತಿ 15 ವರ್ಷಗಳಿಂದ ತನ್ನ ಸ್ವರೂಪ ವಿಸ್ತರಿಸಿಕೊಂಡಿದೆ. ಕುಶಾಲನಗರ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡಂತೆ ಹನುಮ ಜಯಂತಿ ಆಚರಣೆಗೆ ಮುಂದಾದ ನಂತರ ಮಡಿಕೇರಿ, ಗೋಣಿಕೊಪ್ಪಲಿನಲ್ಲಿ ನಡೆಯುವ ದಸರಾ ರೀತಿಯ ವೈಭವ ಪಡೆದುಕೊಂಡಿದೆ.