ಸಾರಾಂಶ
ಬೆಂಗಳೂರು ನಗರದಲ್ಲಿರುವಂತೆ ಆನೇಕಲ್ ತಾಲೂಕಿನ ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದಿಂದ ತಾಲೂಕಿನ ವಿವಿಧೆಡೆಗೆ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಆನೇಕಲ್: ಬೆಂಗಳೂರು ನಗರದಲ್ಲಿರುವಂತೆ ಆನೇಕಲ್ ತಾಲೂಕಿನ ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದಿಂದ ತಾಲೂಕಿನ ವಿವಿಧೆಡೆಗೆ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಹಳದಿ ಮಾರ್ಗದ ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದಲ್ಲಿ ಹೊಸ ಮಾರ್ಗದ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ವ್ಯಾಪ್ತಿಯ ಹೊಸ ರಸ್ತೆ, ಬೆರಟೇನ ಅಗ್ರಹಾರ, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರಕ್ಕೆ ಪ್ರತ್ಯೇಕ ಬಸ್ ಸೇವೆ ಒದಗಿಸಲಾಗುವುದು. ಹಳದಿ ಮಾರ್ಗದ ಮೆಟ್ರೋ ರೈಲಿನಲ್ಲಿ 18 ನಿಲ್ದಾಣಗಳಿದ್ದು, ಸದ್ಯಕ್ಕೆ 3 ನಿಲ್ದಾಣಗಳಿಗೆ ಬಸ್ ಸೇವೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿಕ ಭಾಗಗಳಿಗೆ ಬಸ್ ಸೇವೆ ಒದಗಿಸಲಾಗುವುದು ಎಂದರು.
ಈ ವೇಳೆ ಹಳದಿ ಮಾರ್ಗದ ಮೆಟ್ರೋದಲ್ಲಿ ರಾಮಲಿಂಗರೆಡ್ಡಿ ಸಂಚರಿಸಿದರು. ಶಾಸಕ ಎಂ.ಕೃಷ್ಣಪ್ಪ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್, ಅಧಿಕಾರಿಗಳಾದ ಎಂ.ಶಿಲ್ಪಾ, ಅಬ್ದುಲ್ ಅಹಾದ್, ಅಸೋಸಿಯೇಷನ್ ಶ್ರೀರಾಮ್ ಇದ್ದರು.