ಭಾಷೆಗೂ ಭಾವನೆಗೂ ಅವಿನಾಭಾವ ಸಂಬಂಧವಿದೆ

| Published : Nov 01 2024, 12:14 AM IST

ಸಾರಾಂಶ

ಭಾಷೆ ಎಂಬುವುದು ಭಾವನೆಗೆ ಸಂಬಂಧಿಸಿದ್ದಾಗಿದೆ. ಕನ್ನಡಕ್ಕೆ ಅನೇಕ ಸಮಸ್ಯೆಗಳು ಎದುರಾಗಿದ್ದು ಎಳೆಯ ತಲೆಮಾರುಗಳಲ್ಲಿ ಕನ್ನಡವನ್ನು ಕಡಿದು ಹಾಕುತ್ತಿದೆ. ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಕ ಶಿಕ್ಷಣ ಕ್ರಮ ಒತ್ತು ನೀಡುತ್ತಿರುವುದು ಅಪಾಯಕಾರಿ. ಕನ್ನಡದಲ್ಲೇ ಪ್ರಾಥಮಿಕ ಹಂತದವರೆಗೆ ಶಿಕ್ಷಣ ಕಡ್ಡಾಯವಾಗಲಿ.

ಕನ್ನಡಪ್ರಭ ವಾರ್ತೆ ಕೋಲಾರಹಿಂದಿನ ದಿನಕ್ಕಿಂತ ನಾಳೆಯೇ ಲೇಸು ಎಂಬ ನುಡಿಯು ಅರ್ಥಪೂರ್ಣವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಅರೋಗ್ಯಕರ ಮನಸ್ಸು ಅಗತ್ಯವಿದೆ. ಭಾಷೆಗೂ ಭಾವನೆಗೂ ಅವಿನಭಾಜ್ಯ ಸಂಬಂಧವಿದೆ. ಕನ್ನಡ ಭಾಷೆ ಸಂವಾಹನ ಅಭಿವ್ಯಕ್ತವಾಗುತ್ತಿದೆ ಎಂದು ಡಾ.ಕೆ.ರಾಜಕುಮಾರ್ ಅಭಿಪ್ರಾಯಪಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಕರ್ತರ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಸಲುವಾಗಿ ಕನ್ನಡ ಪರಿಚಾರಕ-೨೦೨೪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕನ್ನಡ ಪರಿಚಾರಕ ಎಂಬುವುದಕ್ಕಿಂತ ನುಡಿ ಪರಿಚಾರಕ ಎಂಬುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು. ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನೀಡಿ

ಭಾಷೆ ಎಂಬುವುದು ಭಾವನೆಗೆ ಸಂಬಂಧಿಸಿದ್ದಾಗಿದೆ. ಕನ್ನಡಕ್ಕೆ ಅನೇಕ ಸಮಸ್ಯೆಗಳು ಎದುರಾಗಿದ್ದು ಎಳೆಯ ತಲೆಮಾರುಗಳಲ್ಲಿ ಕನ್ನಡವನ್ನು ಕಡಿದು ಹಾಕುತ್ತಿದೆ. ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಕ ಶಿಕ್ಷಣ ಕ್ರಮ ಒತ್ತು ನೀಡುತ್ತಿರುವುದು ಅಪಾಯಕಾರಿಯಾಗಿದೆ. ಕನ್ನಡಭಾಷೆಯಲ್ಲಿ ಪ್ರಾಥಮಿಕ ಹಂತದವರೆಗೆ ಕಡ್ಡಾಯವಾಗಬೇಕೆಂಬ ಮನವಿಯಲ್ಲಿ ಉಂಟಾದ ಒಂದು ಪದದ ವ್ಯತ್ಯಾಸದಿಂದಾದಾಗ ಕಡ್ಡಾಯದ ಆದೇಶವು ಕೊಚ್ಚಿ ಹೋಯಿತು ೪ನೇ ತರಗತಿ ಬದಲಾಗಿ ೫ನೇ ತರಗತಿವರೆಗೆ ಎಂದಿದ್ದರಿಂದ ಆದೇಶ ತಿರಸ್ಕರಿಸಲಾಯಿತು, ಕೇಂದ್ರ ಸರ್ಕಾರವು ೧ರಿಂದ ೪ ವರೆಗೆ ಕನ್ನಡ ಕಡ್ಡಾಯ ಜಾರಿಗೆ ತರುವಂತಾಗಬೇಕು ಎಂದು ಹೇಳಿದರು.ದೃಶ್ಯ ಮಾದ್ಯಮಗಳಿಗಿಂತ ಮುದ್ರಣ ಮಾಧ್ಯಮಗಳು ಪರಿಣಾಮಕಾರಿಯಾಗಿದೆ. ಸಮಾಜದ ಸಮಸ್ಯೆಗಳನ್ನು ಮಾದ್ಯಮಗಳು ಎತ್ತಿ ಹಿಡಿದು ಪರಿಹರಿಸಿದಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಅದರೆ ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳು ಎಷ್ಟು ವರ್ಷ ಉಳಿವು ಸಾಧ್ಯ ಎಂಬ ಚಿಂತನೆಯನ್ನು ಕಾಣುವಂತಾಗಿದೆ ಎಂಬ ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಂಘಟನೆಗಳ ಉದಯಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿಜ ಪರಿಚಾರಕ ಆರ್ಹರಿಗೆ ಪ್ರಶಸ್ತಿಗಳು ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಚಲೋ, ಭಾಷ್ಯವಾರು ಪ್ರಾಂತ್ಯಗಳ ವಿಂಗಡಣೆ, ಬಾರಿಸು ಕನ್ನಡ ಡಿಂಡಿಮವ, ಉದಯವಾಗಲಿ ಕನ್ನಡ ನಾಡು, ಕಾಳಿಂಗರಾಯರ ಉದಯವಾಯಿತು ಕನ್ನಡ ನಾಡು ಎಂಬ ಹಾಡುಗಳ ರಚಿಸಿ ಸಂಘಟನೆ ಮಾಡಲಾಯಿತು ಎಂದರು.