ಸಾರಾಂಶ
ರಾಜ್ಯದ ಸಾಂವಿಧಾನಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಸರ್ ಸಿದ್ದಪ್ಪ ತೋಟಪ್ಪ ಕಂಬಳಿ ಅವರು ಮಾಡಿದ ಹೋರಾಟ ಮತ್ತು ಅಭಿವೃದ್ಧಿ ಪರ ನಿಲುವುಗಳು ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ.
ಹುಬ್ಬಳ್ಳಿ:
ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರು ನಾಮಕರಣ ಮಾಡಲು ಸರ್ಕಾರದ ವತಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ವಿಪ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.ಕರ್ನಾಟಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಸಾಮಾಜಿಕ ನ್ಯಾಯದ ಬಲವರ್ಧನೆಗೆ ತಮ್ಮ ಸರ್ಕಾರ ನೀಡುತ್ತಿರುವ ಆದ್ಯತೆ ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ರಾಜ್ಯದ ಸಾಂವಿಧಾನಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಸರ್ ಸಿದ್ದಪ್ಪ ತೋಟಪ್ಪ ಕಂಬಳಿ ಅವರು ಮಾಡಿದ ಹೋರಾಟ ಮತ್ತು ಅಭಿವೃದ್ಧಿ ಪರ ನಿಲುವುಗಳು ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ ಎಂದಿದ್ದಾರೆ.
ಶಿಕ್ಷಣದ ಮೂಲಕ ಸಮಾಜದ ಪರಿವರ್ತನೆ ಸಾಧ್ಯವೆಂದು ನಂಬಿದ್ದ ಅವರು ಕಾನೂನು ಶಿಕ್ಷಣದ ಮಹತ್ವವನ್ನು ನಿರಂತರವಾಗಿ ಒತ್ತಿ ಹೇಳಿದ್ದಾರೆ. ನಿರಂತರ 25 ವರ್ಷ ಬಾಂಬೆ ಪ್ರಾಂತ ಸಭೆಯ ಸದಸ್ಯರಾಗಿದ್ದರು ಮತ್ತು ಹೆಸರುವಾಸಿ ಪ್ರತಿಸ್ಪರ್ಧಿಗಳ ವಿರುದ್ಧವೂ ಆಯ್ಕೆಯಾಗಿ ಶಿಕ್ಷಣ, ನೀರಾವರಿ, ಕೃಷಿ, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಇನ್ನಿತರ ಹಲವು ಇಲಾಖೆಗಳ ಸಚಿವ ಸ್ಥಾನವನ್ನು ಬಾಂಬೆ ಸರ್ಕಾರದಲ್ಲಿ ನಿರ್ವಹಸಿದ ಅವರಿಗೆ ಬ್ರಿಟಿಷ್ ಸರ್ಕಾರ "ದೇವನ್ ಬಹದ್ದೂರ್ " ಮತ್ತು "ಸರ್ " ಎಂಬ ಬಿರುದು ನೀಡಿ ಗೌರವಿಸಿರುವುದು ಸಾಕ್ಷಿಯಾಗಿದೆ. ಇಂತಹ ಸಾರ್ವಜನಿಕ ಜೀವನದಲ್ಲಿ ಅಚಲ, ನೈತಿಕತೆ, ಸರಳತೆ ಮತ್ತು ನಿಸ್ವಾರ್ಥ ಸೇವೆಗಳೊಂದಿಗೆ ಅರ್ಥಪೂರ್ಣ ಜೀವನ ನಡೆಸಿದ ಅವರ ಸ್ಮರಣಾರ್ಥವಾಗಿ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಅವರ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))