ಗ್ರಂಥಾಲಯಗಳು ಜ್ಞಾನ ಸಂಪನ್ಮೂಲ ಕೇಂದ್ರಗಳಿದ್ದಂತೆ

| Published : Nov 23 2025, 02:30 AM IST

ಸಾರಾಂಶ

ಗ್ರಂಥಾಲಯಗಳು ಜ್ಞಾನ ಸಂಪನ್ಮೂಲಗಳ ಕೇಂದ್ರವಾಗಿದ್ದು, ಕೃತಿಕಾರರು, ವಿಚಾರವಂತರು, ಸಂಶೋಧಕರು ಅನೇಕ ವರ್ಷಗಳ ಕಾಲ ಸಂಪಾದಿಸಿದ ಸಂಗ್ರಹಿಸಿದ, ಸಂಶೋಧನೆ, ಜ್ಞಾನವನ್ನು ಮುದ್ರಿತ ರೂಪದಲ್ಲಿ ತಂದಿರುವುದೇ ಗ್ರಂಥಗಳಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಎಸ್. ಗೋವಿಂದರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಗ್ರಂಥಾಲಯಗಳು ಜ್ಞಾನ ಸಂಪನ್ಮೂಲಗಳ ಕೇಂದ್ರವಾಗಿದ್ದು, ಕೃತಿಕಾರರು, ವಿಚಾರವಂತರು, ಸಂಶೋಧಕರು ಅನೇಕ ವರ್ಷಗಳ ಕಾಲ ಸಂಪಾದಿಸಿದ ಸಂಗ್ರಹಿಸಿದ, ಸಂಶೋಧನೆ, ಜ್ಞಾನವನ್ನು ಮುದ್ರಿತ ರೂಪದಲ್ಲಿ ತಂದಿರುವುದೇ ಗ್ರಂಥಗಳಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಎಸ್. ಗೋವಿಂದರಾಜು ತಿಳಿಸಿದರು. ನಗರದ ಶಾಖಾ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯಗಳಲ್ಲಿ ಕೃತಿಕಾರರು, ವಿಚಾರವಂತರು, ಸಂಶೋಧಕರು, ಅನೇಕ ವರ್ಷಗಳ ಕಾಲ ಸಂಪಾದಿಸಿದ, ಸಂಗ್ರಹಿಸಿದ, ಸಂಶೋಧನೆ ಮಾಡಿದ ಗ್ರಂಥಗಳು ಲಭ್ಯವಿರುವುದರಿಂದ ಜನರಿಗೆ ಓದಲು ಅನುಕೂಲವಾಗಲಿದೆ. ಪುಸ್ತಕ ಓದುವುದು ಒಂದು ಉತ್ತಮ ಹವ್ಯಾಸವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಸೇರಲು ಗ್ರಂಥಾಲಯ ಬಹುಮುಖ್ಯ ಎಂ ದರು. ಗ್ರಂಥಾಲಯದ ಪ್ರಭಾರದಾರಕ ಡಿ.ಎಸ್. ಚಂದ್ರಶೇಖರ್ ಮಾತನಾಡಿ ಗ್ರಂಥಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಜ್ಞಾನ ವಿಕಸನಕ್ಕೆ ಮಹತ್ವದ ಪಾತ್ರ ವಹಿಸಿದ್ದು, ಇದನ್ನು ಸಮರ್ಪಕವಾಗಿ ಸದುಪಯೋಗಿಸಿಕೊಂಡು ತಮ್ಮ ಬುದ್ದಿಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಸೋಮಣ್ಣ, ಸಿಬ್ಬಂದಿಗಳಾದ ಶೋಭಾ, ಕವಿತ, ವಿದ್ಯಾರ್ಥಿಗಳು ಭಾಗವಹಿಸಿದ್ದರು.