ಮೇಲುಕೋಟೆ ಪಟ್ಟಾಭಿರಾಮನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ ವೈಭವಮೇಲುಕೋಟೆ ಪುರಾತನ ಪಟ್ಟಾಭಿರಾಮನ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳ ವೈಭವ. ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನಿಗೆ ಸೋಮವಾರ ಬೆಳಗ್ಗೆ ಎಣ್ಣೆಕಾಪ್ಪುಸೇವೆ, ಮಹಾಭಿಷೇಕ, ರಾಮತಾರಕಹೋಮ, ಮಹಾ ಮಂಗಳಾರತಿ ಶಾತ್ತುಮೊರೆ. ನಂತರ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ. ಆಚಾರ್ಯ ರಾಮಾನುಜ ದಿವ್ಯಕ್ಷೇತ್ರವಾದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯನ್ನು ಜಗತ್ತಿಗೆ ಪ್ರಕಾಶ ಪಡಿಸಿದ ಪ್ರತೀಕವಾದ ಪುನರ್ವಸು ಉತ್ಸವ ಜ.24ರಂದು ನಡೆಯಲಿದೆ.