ಸಾರಾಂಶ
‘ಆಪರೇಷನ್ ಸಿಂದೂರ’ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಟಿಬಿ ಡ್ಯಾಂನಲ್ಲಿ ಶನಿವಾರ ಕೇಂದ್ರ ಕೈಗಾರಿಕಾ ಪಡೆ (ಕೆಎಸ್ಐಎಸ್ಎಫ್) ವತಿಯಿಂದ ಮಾಕ್ ಡ್ರಿಲ್ ನಡೆಸಲಾಯಿತು.
ಹೊಸಪೇಟೆ : ‘ಆಪರೇಷನ್ ಸಿಂದೂರ’ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಟಿಬಿ ಡ್ಯಾಂನಲ್ಲಿ ಶನಿವಾರ ಕೇಂದ್ರ ಕೈಗಾರಿಕಾ ಪಡೆ (ಕೆಎಸ್ಐಎಸ್ಎಫ್) ವತಿಯಿಂದ ಮಾಕ್ ಡ್ರಿಲ್ ನಡೆಸಲಾಯಿತು. ಇದೇ ವೇಳೆ, ಸಂಜೆ 5-6ರ ವೇಳೆ ವಿಶ್ವವಿಖ್ಯಾತ ಮೈಸೂರು ಅರಮನೆಯ ಆವರಣದಲ್ಲಿಯೂ ಮಾಕ್ ಡ್ರಿಲ್ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಟಿಬಿ ಡ್ಯಾಂನಲ್ಲಿ ನಡೆದ ಮಾಕ್ ಡ್ರಿಲ್‌ನಲ್ಲಿ ಜಲಾಶಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸ್ಥಳೀಯ ಭದ್ರತಾ ಸಿಬ್ಬಂದಿ ಭಾಗವಹಿಸಿದ್ದರು. ಯುದ್ಧದ ಸನ್ನಿವೇಶ ಎದುರಾದರೆ ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು. ಡ್ಯಾಂನ ರಕ್ಷಣೆಯನ್ನು ಯಾವ ರೀತಿ ಮಾಡಬೇಕು ಎಂದು ತಜ್ಞರು ವಿವರಣೆ ನೀಡಿದರು. ಜೊತೆಗೆ, ನಗರದ ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ ಮತ್ತು ವಿದ್ವಂಸಕ ಕೃತ್ಯ ನಿಗ್ರಹದಳದಿಂದ ಪರಿಶೀಲನೆ ನಡೆಸಲಾಯಿತು.
ಮೈಸೂರು ಅರಮನೆ ಆವರಣದಲ್ಲಿ ನಡೆದ ಮಾಕ್ ಡ್ರಿಲ್‌ನಲ್ಲಿ ಸಿಐಎಸ್ಎಫ್, ಪೊಲೀಸ್, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ, ಫೊರೆನ್ಸಿಕ್ ಸೇರಿದಂತೆ ವಿವಿಧ ಇಲಾಖೆಯ 500ಕ್ಕೂ ಹೆಚ್ಚಿನ ಸಿಬ್ಬಂದಿ ಇದರಲ್ಲಿ ಭಾಗವಹಿಸಿದ್ದರು.
ಮಂಡ್ಯ ಜಿಲ್ಲೆ ಕೆಆರ್‌ಎಸ್ ಬೃಂದಾವನದ ಉದ್ಯಾನವನದಲ್ಲಿ ಭಾನುವಾರ ಸಂಜೆ 4 ರಿಂದ 7ಗಂಟೆವರೆಗೆ ಮಾಕ್‌ಡ್ರಿಲ್ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))