ಸಾರಾಂಶ
ಕಾಂಗ್ರೆಸ್ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜನಾಂದೋಲನ ಯಾತ್ರೆ ನಡೆಸುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಂಜೆ ಮೈಸೂರಿನಗೆ ಆಗಮಿಸಿ, ವಾಸ್ತವ್ಯ ಹೂಡಿದ್ದಾರೆ.ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ,. ಕಾಂಗ್ರೆಸ್ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜನಾಂದೋಲನ ಯಾತ್ರೆ ನಡೆಸುತ್ತಿದೆ. ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ನೀಡಿರುವ ದೂರಿನ ಮೇರೆಗೆ ನೋಟೀಸ್ ನೀಡಿರುವ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಪ್ರತ್ಯುತರ ನೀಡಿದೆ. ಹೀಗಿರುವಾಗ ರಾಜ್ಯಪಾಲರ ಮುಂದಿನ ನಡೆ ಏನು? ಎಂಬ ಚರ್ಚೆ ಜೋರಾಗಿರುವಾಗ ಸಿದ್ದರಾಮಯ್ಯ ಅವರು ಇದ್ಯಾವುದನ್ನು ತಲೆಕೆಡಿಸಿಕೊಳ್ಳದೇ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.
ಬೆಂಗಳೂರಿನಿಂದ ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ಆಗಮಿಸಿದ ಅವರು ಹುಣಸೂರು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರೊಂದಿಗೆ ಕಾರಿನಲ್ಲಿ ಕುವೆಂಪುನಗರ ವಿಶ್ವಮಾನವ ಜೋಡಿ ರಸ್ತೆಗೆ ತೆರಳಿ, ಅಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ಮನೆಯ ಕಾಮಗಾರಿ ವೀಕ್ಷಿಸಿದರು.ಅತಿಥಿ ಉಪನ್ಯಾಸಕರಿಂದ ಮನವಿ
ಮುಷ್ತರ ನಿರತ ಮೈಸೂರು ವಿವಿ ಅತಿಥಿ ಉಪನ್ಯಾಸಕರಿಂದ ಮನವಿ ಸ್ವೀಕರಿಸಿದ ಸಿಎಂ ಸೂಕ್ತ ಕ್ರಮದ ಬಗ್ಗೆ ಕುಲಪತಿ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದರು.ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ನಂತರ ರಸ್ತೆಯ ಮೂಲಕ ಬೆಂಗಳೂರಿಗೆ ವಾಪಸ್ ಆಗುವರು. ಇದಕ್ಕೂ ಮೊದಲು ಪಕ್ಷದ ಮುಖಂಡರು ಅವರನ್ನು ಭೇಟಿ ಮಾಡಿ, ಆ.9 ರಂದು ನಗರದಲ್ಲಿ ನಡೆಸುವ ಬೃಹತ್ ಸಭೆಯ ಬಗ್ಗೆ ಸಮಾಲೋಚಿಸುವರು.