ಎನ್‌. ಧನಂಜಯಗೆ ರಂಗ ರತ್ನ 2024 ಪ್ರಶಸ್ತಿ ಪ್ರದಾನ

| Published : Jun 20 2025, 12:34 AM IST / Updated: Jun 20 2025, 12:35 AM IST

ಎನ್‌. ಧನಂಜಯಗೆ ರಂಗ ರತ್ನ 2024 ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು: ಹಿರಿಯ ರಂಗಕರ್ಮಿ ಡಾ.ನ. ರತ್ನ ಅವರ ವರ್ಷದ ನೆನಪಿಗಾಗಿ ರತ್ನ ಎಂದೆಂದಿಗೂ ರತ್ನ ಕಾರ್ಯಕ್ರಮದಲ್ಲಿ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಎನ್‌. ಧನಂಜಯ ಅವರಿಗೆ ರಂಗ ರತ್ನ 2024 ಪ್ರದಾನ ಮಾಡಲಾಯಿತು.

ಮೈಸೂರು: ಹಿರಿಯ ರಂಗಕರ್ಮಿ ಡಾ.ನ. ರತ್ನ ಅವರ ವರ್ಷದ ನೆನಪಿಗಾಗಿ ರತ್ನ ಎಂದೆಂದಿಗೂ ರತ್ನ ಕಾರ್ಯಕ್ರಮದಲ್ಲಿ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಎನ್‌. ಧನಂಜಯ ಅವರಿಗೆ ರಂಗ ರತ್ನ 2024 ಪ್ರದಾನ ಮಾಡಲಾಯಿತು.

ನಗರದ ರೋಟರಿ ಸಭಾಂಗಣದಲ್ಲಿ ನ. ರತ್ನ ಅವರ ಆತ್ಮೀಯರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತರನ್ನು ಗೌರವಿಸುವುದರ ಜೊತೆಗೆ ನ. ರತ್ನ ಅವರು ಬರೆದಿರುವ ‘ಕೈಯಲ್ಲಿ ಕೈಲಾಸಂ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಗೀತಾ ಬುಕ್ ಹೌಸ್‌ ನ ಸತ್ಯನಾರಾಯಣ ರಾವ್‌ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆಗೊಳಿಸಲಾಯಿತು.

ನ. ರತ್ನ ಅವರು ರಚಿಸಿದ್ದ ಕೈಯಲ್ಲಿ ಕೈಲಾಸಂ ಪುಸ್ತಕವನ್ನು ಗೀತಾ ಬುಕ್ ಹೌಸ್‌ನ ಎಂ. ಸತ್ಯನಾರಾಯಣರಾವ್ ಬಿಡುಗಡೆಗೊಳಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ನ.ರತ್ನ ಅವರ ನಾಟಕದ ತೆಲುಗು ಅನುವಾದ ''''''''ಅಯಾನ್ ಶಾಂತಿ ಕುಟೀರಂ'''' ನಾಟಕವನ್ನು ಪ್ರೇಮಲತಾ ರತ್ನ ಬಿಡುಗಡೆಗೊಳಿಸಿದರು. ಮಲ್ಲಿಕಾರ್ಜುನ ಕೊಂಡೂರಿ ಅವರು ಅನುವಾದಕರ ನುಡಿಗಳನ್ನಾಡಿದರು.

ಈ ವೇಳೆ ಕೈಯಲ್ಲಿ ಕೈಲಾಸಂ ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಶಶಿಧರ್ ಡೋಂಗ್ರೆ, ಈ ಪುಸ್ತಕದಲ್ಲಿ ಎರಡು ಪ್ರಮುಖ ಪ್ರಬಂಧಗಳಿವೆ. ಕೈಲಾಸಂ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪುಸ್ತಕದಲ್ಲಿ ತೆರೆದಿಡಲಾಗಿದೆ ಎಂದು ಅವರು ಹೇಳಿದರು.

ಭಕ್ತರ ಬೆರಗಿಗೆ ಬಲಿಯಾದ ಕೈಲಾಸಂ ಎಂಬ ಪ್ರಬಂಧ ಅರ್ಥಪೂರ್ಣವಾಗಿದೆ. ಆದರೆ, ನ. ರತ್ನ ಅವರು ಕೂಡ ಕೈಲಾಸಂ ಅವರ ಭಕ್ತರು ಎಂದೇ ಕಾಣಿಸುತ್ತದೆ. ಏಕೆಂದರೆ ಕೈಲಾಸಂ ಅವರ ದುಶ್ಚಟಗಳ ಬಗ್ಗೆ ರತ್ನ ಅವರು ಎಲ್ಲಿಯೂ ವಿರೋಧಿಸಿಲ್ಲ ಎಂದು ಅವರು ಹೇಳಿದರು.

ಪುಸ್ತಕದಲ್ಲಿ 20 ಕವಿತೆಗಳಿವೆ. ಅದರಲ್ಲಿ ಕೊಳದ ಕಥೆ ಎಂಬ ಕವಿತೆ ಸುದೀರ್ಘವಾಗಿದೆ. ಅದರಲ್ಲಿ ಪ್ರಕೃತಿ ಸೌಂದರ್ಯ, ಗಿಡಮರ, ಬೆಟ್ಟಗುಡ್ಡಗಳ ಬಗ್ಗೆ ವರ್ಣನೆ ನೀಡಲಾಗಿದೆ. ಇದರ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಕವಿತೆಗಳಿವೆ ಎಂದರು.

ಅಯಾನ್ ಶಾಂತಿ ಕುಟೀರಂ ಪುಸ್ತಕ ಕುರಿತು ಮಾತನಾಡಿದ ಅನುವಾದಕ ಮಲ್ಲಿಕಾರ್ಜುನ ಕೊಂಡೂರಿ, ನ. ರತ್ನ ಅವರು ರಚಸಿರುವ ನಾಟಕವು ತೆಲುಗಿನ ಓದುಗರು ಹಾಗೂ ನನ್ನ ಸ್ನೇಹಿತರಿಗೆ ತಲುಪಲಿ ಎಂಬ ಉದ್ದೇಶದಿಂದ ಅನುವಾದಿಸಲಾಯಿತು ಎಂದು ಅವರು ತಿಳಿಸಿದರು.

ನ. ರತ್ನ ಅವರ ಅಭಿಮಾನಿಗಳು, ಸಾಹಿತಿಗಳು ಹಾಗೂ ಅವರ ಶಿಷ್ಯರು ಪಾಲ್ಗೊಂಡಿದ್ದರು.