ನೂತನ ಸಂಸದ ಎಚ್ಡಿಕೆ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಮಂಡ್ಯ, ರಾಮನಗರ, ಚನ್ನಪಟ್ಟಣ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಮುಂದುವರಿಯಲು ಅನುಮತಿ ಕೊಡಿಸಲು ಮುಂದಾಗಬೇಕು. ಮಳವಳ್ಳಿ ತಾಲೂಕು ಎರಡು ರಾಷ್ಟ್ರೀಯ ಹೆದ್ದಾರಿ ಹೊಂದಿರುವುದರ ಜೊತೆಗೆ ಬೆಂಗಳೂರು- ಮೈಸೂರಿಗೆ ಹತ್ತಿರದಲ್ಲೇ ಇರುವುದರಿಂದ ವ್ಯಾಪಾರಕ್ಕೆ ಸೂಕ್ತ ಸ್ಥಳವಾಗಿದೆ. ಆದ್ದರಿಂದ ರೈಲ್ವೆ ಯೋಜನೆ ಜಾರಿಗೆ ತರಬೇಕು.