ಮುಸ್ಲಿಂ ಕುಟುಂಬದಿಂದ ಗೋಕರ್ಣದಲ್ಲಿ ಪಿತೃಕಾರ್ಯಧಾರವಾಡದ ಮುಸ್ಲಿಂ ಕುಟುಂಬವೊಂದು ಗೋಕರ್ಣಕ್ಕೆ ಆಗಮಿಸಿ ಪಿತೃಕಾರ್ಯ ನೆರವೇರಿಸಿದೆ. ಶಂಸಾದ್ ಎನ್ನುವವರ ಕುಟುಂಬ ಈ ಕಾರ್ಯ ನೆರವೇರಿಸಿದೆ. ಜ್ಯೋತಿಷಿಯೊಬ್ಬರ ಸಲಹೆಯಂತೆ ಮುಸ್ಲಿಂ ಕುಟುಂಬ ಪಿತೃ ಪಕ್ಷದ ಪರ್ವಕಾಲದಲ್ಲಿ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನ ವನ್ನು ಪಿತೃಶಾಲೆಯಲ್ಲಿ ಪೂರೈಸಿದರು.